ಅಫ್ಘಾನ್: ತಾಲಿಬಾನ್ ವಿರುದ್ಧ 5ನೇ ದಿನವೂ ಕಾರ್ಯಾಚರಣೆ

Update: 2019-04-08 18:14 GMT

ಕಾಬೂಲ್, ಎ. 8: ಅಫ್ಘಾನಿಸ್ತಾನದ ಪಶ್ಚಿಮದ ಬಡ್ಗಿಸ್ ರಾಜ್ಯದಲ್ಲಿ ತಾಲಿಬಾನ್ ಬಂಡುಕೋರರು ಬೃಹತ್ ಪ್ರಮಾಣದಲ್ಲಿ ದಾಳಿ ನಡೆಸಿದ್ದು, ಅವರನ್ನು ಹಿಮ್ಮೆಟ್ಟಿಸಲು ಭದ್ರತಾ ಪಡೆಗಳು ಐದನೇ ದಿನವೂ ಹೋರಾಟ ನಡೆಸುತ್ತಿವೆ.

ಕಳೆದ 48 ಗಂಟೆಗಳ ಅವಧಿಯಲ್ಲಿ ಕನಿಷ್ಠ 12 ಭದ್ರತಾ ಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಇದರೊಂದಿಗೆ ಸಂಘರ್ಷದಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆ 40ನ್ನು ದಾಟಿದೆ.ಅದೇ ವೇಳೆ, ಭೂ ಮತ್ತು ವಾಯು ಪಡೆ ದಾಳಿಯಲ್ಲಿ ಡಝನ್‌ಗಟ್ಟಳೆ ಬಂಡುಕೋರರು ಸತ್ತಿದ್ದಾರೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News