ಮೆಸ್ಸಿ ಕಟ್ಟಿಹಾಕುವುದು ಅಸಾಧ್ಯವೇನಲ್ಲ: ಓಲ್

Update: 2019-04-11 05:54 GMT

ಮ್ಯಾಂಚೆಸ್ಟರ್, ಎ.10: ಸ್ಟಾರ್ ಆಟಗಾರ ಬಾರ್ಸಿಲೋನಾ ತಂಡದ ಲಿಯೊನೆಲ್ ಮೆಸ್ಸಿ ತಮ್ಮ ತಂಡಕ್ಕೆ ಯಾವಾಗಲೂ ಅಪಾಯಕಾರಿಯಾಗಿದ್ದು ಪಂದ್ಯದಲ್ಲಿ ಅವರನ್ನು ಕಟ್ಟಿ ಹಾಕುವುದು ಅಸಾಧ್ಯವೇನಲ್ಲ ಎಂದು ಯುನೈಟೆಡ್ ಮ್ಯಾಂಚೆಸ್ಟರ್ ತಂಡದ ಮ್ಯಾನೇಜರ್ ಓಲ್ ಗನ್ನರ್ ಸೋಲ್ಸ್‌ಕೆಜಾರ್ ಅಭಿಪ್ರಾಯಪಟ್ಟಿದ್ದಾರೆ. ಚಾಂಪಿಯನ್ಸ್ ಲೀಗ್‌ನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ತಮ್ಮ ತಂಡಕ್ಕೆ ಮತ್ತಷ್ಟು ಹಾನಿ ಮಾಡುವುದರಿಂದ ಮೆಸ್ಸಿಯನ್ನು ತಡೆಯಬಹುದು ಎಂದು ಓಲ್ ಹೇಳಿದ್ದಾರೆ.

2009 ಹಾಗೂ 2011ರಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಎರಡೂ ಫೈನಲ್ ಪಂದ್ಯಗಳಲ್ಲಿ ಮೆಸ್ಸಿ ಮ್ಯಾಂಚೆಸ್ಟರ್ ತಂಡದ ವಿರುದ್ಧ ಗೋಲು ಸಿಡಿಸಿದ್ದರು. ಈಗ 5ನೇ ಬಾರಿ ಪ್ರಶಸ್ತಿ ಗೆಲ್ಲಲು ಸ್ಟಾರ್ ಆಟಗಾರ ಕಾತರರಾಗಿದ್ದಾರೆ. ಅರ್ಜೆಂಟೀನ ರಾಷ್ಟ್ರೀಯ ತಂಡದ ಆಟಗಾರ ಈ ಋತುವಿನಲ್ಲಿ ಬಾರ್ಸಿಲೋನಾ ತಂಡದ ಪರ 40 ಪಂದ್ಯಗಳಿಂದ 43 ಗೋಲು ಗಳಿಸಿದ್ದಾರೆ.

‘‘ಮೆಸ್ಸಿ ಅದ್ಭುತ ಆಟಗಾರ. ಇತಿಹಾಸದಲ್ಲಿ ಸಾರ್ವಕಾಲಿಕ ಶ್ರೇಷ್ಠ ವೈಯಕ್ತಿಕ ಆಟಗಾರರಾಗಿ ಬೆಳೆಯುವರು. ಅವರನ್ನು ತಡೆಯುವುದು ಕಷ್ಟದ ಕೆಲಸ ಆದರೆ ಅಸಾಧ್ಯವೇನಲ್ಲ’’ ಎಂದು ಓಲ್ ಹೇಳಿದ್ದಾರೆ.

ಬಾರ್ಸಿಲೋನಾ ತಂಡದಲ್ಲಿ ಸ್ವಾರೆಝ್, ಕೌಟಿನೊ, ರಾಕಿಟಿಕ್, ವೈಡಾಲ್ ಸೇರಿದಂತೆ ಹಲವು ಪ್ರಮುಖ ಆಟಗಾರರಿದ್ದಾರೆ. ಹಾಗಾಗಿ ನಾವು ಒಬ್ಬ ಆಟಗಾರನ ಕಡೆ ಗಮನ ಕೊಡಬಾರದು. ಎಲ್ಲ 11 ಮಂದಿಯ ವಿರುದ್ಧ ನಾವು ಆಡಬೇಕು’’ ಎಂದು ಓಲ್ ಕಿವಿಮಾತು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News