ಐಪಿಎಲ್ ದಾಖಲೆ ಸೃಷ್ಟಿಸಿದ ದೀಪಕ್ ಚಹಾರ್

Update: 2019-04-11 05:59 GMT

ಚೆನ್ನೈ, ಎ.10: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಧ್ಯಮ ವೇಗದ ಬೌಲರ್ ದೀಪಕ್ ಚಹಾರ್ ಐಪಿಎಲ್‌ನಲ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದ್ದಾರೆ. ಇನಿಂಗ್ಸ್ ವೊಂದರಲ್ಲಿ ಅತೀ ಹೆಚ್ಚು ಡಾಟ್ ಬಾಲ್ ಮಾಡಿದ ಬೌಲರ್ ಅವರಾಗಿದ್ದಾರೆ.

 ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ನಾಲ್ಕು ಓವರ್‌ಬೌಲಿಂಗ್ ಮಾಡಿದ್ದ ಅವರು, 20 ಡಾಟ್ ಬಾಲ್‌ಗಳನ್ನು ಎಸೆದಿದ್ದರು. ಆದರೆ ನಾಲ್ಕು ಎಸೆತಗಳಲ್ಲಿ ಮಾತ್ರ 20 ರನ್ ಬಿಟ್ಟುಕೊಟ್ಟಿದ್ದರು. ಈ ದಾಖಲೆ ಮೊದಲು ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಮಧ್ಯಮವೇಗಿ ಅಂಕಿತ್ ರಾಜಪೂತ್‌ರ (ತಲಾ 18 ಡಾಟ್‌ಬಾಲ್) ಜಂಟಿ ಹೆಸರಲ್ಲಿತ್ತು. 26 ವರ್ಷದ ಚಹಾರ್, ಮಂಗಳವಾರದ ಪಂದ್ಯದಲ್ಲಿ ಕೆಕೆಆರ್‌ನ ಅಗ್ರಕ್ರಮಾಂಕ ನೆಲಕಚ್ಚುವಂತೆೆ ಮಾಡಿದ್ದರು. ತಾವೆಸೆದ ಮೊದಲ ಓವರ್‌ನಲ್ಲಿ ಕ್ರಿಸ್ ಲಿನ್‌ರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿದ್ದರು. ತಮ್ಮ 2 ಹಾಗೂ ಮೂರನೇ ಓವರ್‌ನಲ್ಲಿ ಕ್ರಮವಾಗಿ ನಿತೀಶ್ ರಾಣಾ ಹಾಗೂ ರಾಬಿನ್ ಉತ್ತಪ್ಪರನ್ನು ಪೆವಿಲಿಯನ್‌ಗೆ ಕಳುಹಿಸಿದ್ದರು.

ಆ ಬಳಿಕ 19ನೇ ಓವರ್ ಎಸೆದ ಚಹಾರ್, ಸ್ಫೋಟಕ ಹೊಡೆತಗಳ ಆಟಗಾರ ಆ್ಯಂಡ್ರೆ ರಸೆಲ್ ಸ್ಟ್ರೈಕ್‌ನಲ್ಲಿದ್ದ ವೇಳೆ 5 ಡಾಟ್ ಬಾಲ್ ಎಸೆದಿದ್ದರು.

ಇನಿಂಗ್ಸ್‌ವೊಂದರಲ್ಲಿ ಅತೀ ಹೆಚ್ಚು ಡಾಟ್‌ಬಾಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News