ಮ್ಯಾನ್ಮಾರ್: 9,000 ಕೈದಿಗಳಿಗೆ ಕ್ಷಮಾದಾನ

Update: 2019-04-17 15:51 GMT

ಯಾಂಗನ್, ಎ. 17: ಮ್ಯಾನ್ಮಾರ್ ಸರಕಾರವು ದೇಶಿ ಹೊಸ ವರ್ಷದ ಮೊದಲ ದಿನವಾದ ಬುಧವಾರ ಕ್ಷಮಾದಾನ ಘೋಷಿಸಿದ್ದು, 9,000ಕ್ಕೂ ಅಧಿಕ ಕೈದಿಗಳನ್ನು ವಿವಿಧ ಜೈಲುಗಳಿಂದ ಬಿಡುಗಡೆ ಮಾಡಲಿದೆ.

ಮ್ಯಾನ್ಮಾರ್ ಹೊಸ ವರ್ಷದ ಸಂದರ್ಭದಲ್ಲಿ 16 ವಿದೇಶಿಯರು ಸೇರಿದಂತೆ 9,353 ಕೈದಿಗಳಿಗೆ ಕ್ಷಮಾದಾನ ನೀಡಲಾಗಿದೆ ಎಂದು ಅಧ್ಯಕ್ಷ ವಿನ್ ಮ್ಯಿಂಟ್ ತಿಳಿಸಿದರು. ಜನರ ಶಾಂತಿ ಮತ್ತು ಸಂತೋಷಕ್ಕಾಗಿ ಹಾಗೂ ಮಾನವೀಯ ಕಳವಳಗಳನ್ನು ಗಮನದಲ್ಲಿರಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕ್ಷಮಾದಾನ ಮಾಡಬಹುದಾದ ಇತರ ಕೈದಿಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದು ತನ್ನ ಫೇಸ್‌ಬುಕ್ ಪುಟದಲ್ಲಿ ಹಾಕಿದ ಹೇಳಿಕೆಯೊಂದರಲ್ಲಿ ಅವರು ಹೇಳಿದ್ದಾರೆ.

ಸರಕಾರಿ ರಹಸ್ಯಗಳ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಜೈಲಿನಲ್ಲಿರುವ ಇಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಯ ಪತ್ರಕರ್ತರು ಈ ಪಟ್ಟಿಯಲ್ಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News