ಮಸೂದ್ ಅಝರ್ ಪ್ರಕರಣ ‘ಇತ್ಯರ್ಥದತ್ತ’: ಚೀನಾ

Update: 2019-04-17 17:35 GMT

ಬೀಜಿಂಗ್, ಎ. ೧೭: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ನ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಷಯವು ‘ಇತ್ಯರ್ಥ’ಗೊಳ್ಳುವುದರತ್ತ ಸಾಗಿದೆ ಎಂದು ಚೀನಾ ಬುಧವಾರ ಹೇಳಿದೆ.

ಅವನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಲು ತನ್ನದೇ ನಿರ್ಣಯವನ್ನು ಮಂಡಿಸದಂತೆ ಅದು ಅಮೆರಿಕಕ್ಕೆ ಸೂಚಿಸಿದೆ.

‘‘ಮಸೂದ್ ಅಝರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಚೀನಾದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಸಂಬಂಧಪಟ್ಟ ಪಕ್ಷಗಳೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಈ ವಿಷಯ ಈಗ ಇತ್ಯರ್ಥಗೊಳ್ಳುವುದರಲ್ಲಿದೆ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News