×
Ad

15 ಲಕ್ಷ ಬಳಕೆದಾರರ ಇಮೇಲ್ ವಿಳಾಸ ಗೊತ್ತಿಲ್ಲದೆ ಅಪ್‌ಲೋಡ್: ಫೇಸ್‌ಬುಕ್

Update: 2019-04-18 23:13 IST

ಕ್ಯಾಲಿಫೋರ್ನಿಯ (ಅಮೆರಿಕ), ಎ. 18: 2006 ಮೇ ತಿಂಗಳಿನಿಂದ ಸುಮಾರು 15 ಲಕ್ಷ ಹೊಸ ಬಳಕೆದಾರರ ಇಮೇಲ್ ವಿಳಾಸಗಳನ್ನು ತಾನು ‘ಉದ್ದೇಶರಹಿತವಾಗಿ  ಅಪ್‌ಲೋಡ್ ಮಾಡಿರುವ’ ಸಾಧ್ಯತೆಯಿದೆ ಎಂದು ಫೇಸ್‌ಬುಕ್ ಕಂಪೆನಿ ಬುಧವಾರ ಹೇಳಿದೆ.

ಇದರೊಂದಿಗೆ ಫೇಸ್‌ಬುಕ್ ಖಾಸಗಿತನಕ್ಕೆ ಸಂಬಂಧಿಸಿದ ಹೊಸ ಸವಾಲೊಂದನ್ನು ಎದುರಿಸುತ್ತಿದೆ.

ಫೇಸ್‌ಬುಕ್‌ಗೆ ಹೊಸದಾಗಿ ಸೇರ್ಪಡೆಗೊಂಡವರಿಗೆ ಇಮೇಲ್ ಪಾಸ್‌ವರ್ಡ್ ತಪಾಸಣೆಯನ್ನು ಒಂದು ಆಯ್ಕೆಯಾಗಿ ನೀಡುವುದನ್ನು ಫೇಸ್‌ಬುಕ್ ನಿಲ್ಲಿಸಿದೆ ಎಂದು ಅದು ತಿಳಿಸಿದೆ. ಜನರು ಹೊಸದಾಗಿ ಫೇಸ್‌ಬುಕ್ ಖಾತೆ ತೆರೆಯುವಾಗ ಅವರ ಇಮೇಲ್ ವಿಳಾಸವನ್ನು ಫೇಸ್‌ಬುಕ್‌ಗೆ ಹಾಕಿರುವ ಪ್ರಕರಣಗಳಿವೆ ಎಂದು ಅದು ಹೇಳಿದೆ.

‘‘ಸುಮಾರು ೧೫ ಲಕ್ಷ ಜನರ ಇಮೇಲ್ ವಿಳಾಸಗಳನ್ನು ಫೇಸ್‌ಬುಕ್‌ಗೆ ಹಾಕಿರಬಹುದು ಎಂಬುದಾಗಿ ಭಾವಿಸಲಾಗಿದೆ. ಈ ವಿಳಾಸಗಳನ್ನು ಯಾರೊಂದಿಗೂ ಶೇರ್ ಮಾಡಲಾಗಿಲ್ಲ. ಈಗ ನಾವು ಅವುಗಳನ್ನು ಡಿಲೀಟ್ ಮಾಡುತ್ತಿದ್ದೇವೆ’’ ಎಂದು ಫೇಸ್‌ಬುಕ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಈ ಸಮಸ್ಯೆಯನ್ನು ಈಗ ಪರಿಹರಿಸಲಾಗಿದೆ ಎಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News