1993ರ ಬಳಿಕ ಫೈನಲ್ ತಲುಪಿದ ಆಸ್ಟ್ರೇಲಿಯ

Update: 2019-04-21 18:45 GMT

ಬ್ರಿಸ್ಬೇನ್, ಎ.21: ನಿರ್ಣಾಯಕ 5ನೇ ಸರಣಿಯಲ್ಲಿ ಆ್ಯಶ್ಲೆ ಬಾರ್ಟಿ ಹಾಗೂ ಸಮಂತಾ ಸ್ಟೋಸರ್ ಅವರು ಬೆಲಾರಸ್‌ನ ವಿಕ್ಟೋರಿಯಾ ಅಝರೆಂಕಾ ಹಾಗೂ ಆರ್ಯನಾ ಸಬಾಲೆಂಕಾ ಅವರನ್ನು ಮಣಿಸುವ ಮೂಲಕ ಆಸ್ಟ್ರೇಲಿಯ 1993ರ ಬಳಿಕ ಪ್ರಥಮ ಬಾರಿಗೆ ಫೆಡ್ ಕಪ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ತಲುಪುವಂತೆ ಮಾಡಿದ್ದಾರೆ. ಆಸೀಸ್ ಜೋಡಿಯ ಹೋರಾಟಕಾರಿ 7-5, 3-6, 6-2 ಸೆಟ್‌ಗಳ ಗೆಲುವಿನಿಂದ ನವೆಂಬರ್‌ನಲ್ಲಿ ನಡೆಯುವ ಫೈನಲ್ ಹಣಾಹಣಿಯಲ್ಲಿ ಫ್ರಾನ್ಸ್ ಇಲ್ಲವೇ ರೊಮಾನಿಯಾ ತಂಡವನ್ನು ಎದುರಿಸಲು ಸಾಧ್ಯವಾಗಿದೆ. ನಿರ್ಣಾಯಕ ಡಬಲ್ಸ್ ಪಂದ್ಯಕ್ಕಿಂತ ಮೊದಲು ನಡೆದ ರಿವರ್ಸ್ ಸಿಂಗಲ್ಸ್‌ನಲ್ಲಿ ಅಝರೆಂಕಾ ಅವರಿ ಸ್ಟೋಸರ್‌ರನ್ನು 6-1, 6-1ರಿಂದ ಮಣಿಸಿದರೆ, ಬಾರ್ಟಿ ಅವರು ಸಬಾಲೆಂಕಾ ಅವರನ್ನು 6-2, 6-2ರಿಂದ ಸೋಲಿಸಿದರು.

ಯುಎಸ್ ಓಪನ್ ಮಾಜಿ ಚಾಂಪಿಯನ್ ಸ್ಟೋಸರ್ ತವರು ನೆಲದಲ್ಲಿ ಜಯಕ್ಕಾಗಿ ಮತ್ತೊಮ್ಮೆ ಪರದಾಟ ನಡೆಸಿದರು. ಯಶಸ್ಸು ಅಷ್ಟು ಸರಳವಾಗಿ ಅವರಿಗೆ ಒಲಿಯಲಿಲ್ಲ. ಆಸ್ಟ್ರೇಲಿಯದಲ್ಲಿ ಜನವರಿಯಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯ ಓಪನ್‌ನಲ್ಲಿ ಕಾಣಿಸಿಕೊಂಡಿದ್ದ ಅವರು, ಮಹಿಳಾ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News