ಶ್ರೀಲಂಕಾ ಉಗ್ರದಾಳಿ: ಡೆನ್ಮಾರ್ಕ್‌ನ ಅತ್ಯಂತ ಶ್ರೀಮಂತನ 3 ಮಕ್ಕಳು ಮೃತ್ಯು

Update: 2019-04-22 17:05 GMT

ಕೋಪನ್‌ಹ್ಯಾಗನ್ (ಡೆನ್ಮಾರ್ಕ್), ಎ. 22: ಶ್ರೀಲಂಕಾದಲ್ಲಿ ರವಿವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ, ಡೆನ್ಮಾರ್ಕ್‌ನ ಅತ್ಯಂತ ಶ್ರೀಮಂತ ವ್ಯಕ್ತಿ ಆ್ಯಂಡರ್ಸ್ ಹೊಲ್ಚ್ ಪೊವಲ್ಸನ್ ಮತ್ತು ಅವರ ಪತ್ನಿಯ ಮಕ್ಕಳು ಮೃತಪಟ್ಟಿದ್ದಾರೆ.

ಕುಟುಂಬವು ಶ್ರೀಲಂಕಾದಲ್ಲಿ ಪ್ರವಾಸದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಆ್ಯಂಡರ್ಸ್ ಸ್ಕಾಟ್‌ಲ್ಯಾಂಡ್‌ನಲ್ಲಿರುವ ಒಟ್ಟು ಜಮೀನಿನ ಒಂದು ಶೇಕಡಕ್ಕೂ ಅಧಿಕ  ಭಾಗವನ್ನು ಹೊಂದಿದ್ದಾರೆ ಎಂದು ‘ಫೋರ್ಬ್ಸ್’ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News