×
Ad

ಮಹಿಳಾ ಹಾಕಿ ರಾಷ್ಟ್ರೀಯ ಶಿಬಿರಕ್ಕೆ 60 ಸದಸ್ಯರ ಆಯ್ಕೆ

Update: 2019-04-26 13:20 IST

ಹೊಸದಿಲ್ಲಿ, ಎ.25: ಸ್ಟಾರ್ ನಾಯಕಿ ರಾಣಿ ರಾಂಪಾಲ್ ಸಹಿತ 60 ಆಟಗಾರ್ತಿಯರನ್ನು ಒಳಗೊಂಡ ಭಾರತದ ಸಂಭಾವ್ಯ ಹಾಕಿ ತಂಡವನ್ನು ಗುರುವಾರ ಪ್ರಕಟಿಸಲಾಗಿದ್ದು, ಬೆಂಗಳೂರಿನಲ್ಲಿ ಶುಕ್ರವಾರ ಆರಂಭವಾಗಲಿರುವ ಮಹಿಳಾ ರಾಷ್ಟ್ರೀಯ ಹಾಕಿ ಶಿಬಿರದಲ್ಲಿ ಈ ಎಲ್ಲ ಆಟಗಾರ್ತಿಯರು ಭಾಗವಹಿಸಲಿದ್ದಾರೆ.

ರಾಣಿ ಗಾಯದ ಸಮಸ್ಯೆಯಿಂದಾಗಿ ಮಲೇಶ್ಯಾ ವಿರುದ್ಧ ನಡೆದ ಐದು ಪಂದ್ಯಗಳ ದ್ವಿಪಕ್ಷೀಯ ಹಾಕಿ ಸರಣಿಯಿಂದ ಹೊರಗುಳಿದಿದ್ದರು. ಗೋಲ್‌ಕೀಪರ್ ಸವಿತಾ ಹಾಗೂ ಡಿಫೆಂಡರ್ ದೀಪಾ ಗ್ರೇಸ್ ಎಕ್ಕಾ ಜೊತೆಗೂಡಿ ಎರಡು ವಾರಗಳ ಹಾಕಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಮೇ 4 ರಂದು ಆಯ್ಕೆ ಟ್ರಯಲ್ಸ್ ನಡೆಯಲಿದ್ದು, 60 ಆಟಗಾರ್ತಿಯರ ಪಟ್ಟಿಯನ್ನು 33ಕ್ಕೆ ಇಳಿಸಲಾಗುತ್ತದೆ ಎಂದು ಹಾಕಿ ಇಂಡಿಯಾ ಮಾಧ್ಯಮ ಹೇಳಿಕೆಯೊಂದರಲ್ಲಿ ತಿಳಿಸಿದೆ.

►ರಾಷ್ಟ್ರೀಯ ಹಾಕಿ ಶಿಬಿರದಲ್ಲಿ ಭಾಗವಹಿಸುವವರ ಪಟ್ಟಿ ಇಂತಿದೆ....

►ಗೋಲ್‌ಕೀಪರ್‌ಗಳು: ಸವಿತಾ, ರಜನಿ ಎಟಿಮರ್ಪು, ಸ್ವಾತಿ, ಸೋನಾಲಿ ಮಿಂಝ್, ಬಿಚು ದೇವಿ ಖರಿಬಮ್, ಚಂಚಲ್, ಸಂಧ್ಯಾ ಎಂಜಿ ಹಾಗೂ ಮಹಿಮಾ.

►ಡಿಫೆಂಡರ್‌ಗಳು: ದೀಪಾ ಗ್ರೆಸ್ ಎಕ್ಕಾ, ಗುರ್ಜಿತ್ ಕೌರ್, ಸುಶೀಲಾ ಚಾನು, ನಿಶಾ, ರೀನಾ ಖೋಖರ್, ಸುನೀತಾ ಲಾಕ್ರಾ, ರಶ್ಮಿತಾ ಮಿಂಝ್, ಸುಮನ್ ದೇವಿ ಥೌಡಮ್, ಮಹಿಮಾ ಚೌಧರಿ, ಸಲಿಮಾ ಟೆಟೆ, ಮನ್‌ಪ್ರೀತ್ ಕೌರ್, ವಂದನಾ, ಕಿರಣ್, ರಿತು, ಕಿರಣ್‌ದೀಪ್ ಕೌರ್, ಗುರ್ಲಿನ್ ಗ್ರೆವಾಲ್, ಚೆಲುವಾಂಬಾ ಆರ್.

►ಮಿಡ್‌ಫೀಲ್ಡರ್‌ಗಳು: ನಿಕ್ಕಿ ಪ್ರಧಾನ್, ನೇಹಾ ಗೋಯಲ್, ಲಿಲಿಮಾ ಮಿಂಝ್, ಮೋನಿಕಾ, ಕರಿಶ್ಮಾ ಯಾದವ್, ಸೋನಿಕಾ, ರೇಣುಕಾ ಯಾದವ್, ಶ್ಯಾಮಾ ಟಿಗ್ಡಮ್, ಅನುಜಾ ಸಿಂಗ್, ನಮಿತಾ ಟೊಪ್ಪೊ, ಲಿಲಿ ಚಾನು, ಪ್ರೀತಿ ದುಬೆ, ರೀತ್, ಚೇತನಾ, ಎಲಿನ್ ಲಾಕ್ರಾ, ರಜನಿ ಬಾಲಾ ಹಾಗೂ ಉಪಾಸನಾ ಸಿಂಗ್.

►ಫಾರ್ವರ್ಡ್‌ಗಳು: ರಾಣಿ, ನವನೀತ್ ಕೌರ್, ನವಜೋತ್ ಕೌರ್, ವಂದನಾ ಕಟಾರಿಯಾ, ಲಾಲ್‌ರೆಮ್‌ಸಿಯಾಮಿ, ಪ್ರಿಯಾಂಕಾ ವಾಂಖಡೆ, ಅನುಪಾ ಬಾರಿಯಾ, ಉದಿತಾ, ರಾಜ್ವಿಂದರ್ ಕೌರ್, ಜ್ಯೋತಿ, ಲೀಲಾವತಿ ಮಲ್ಲಮಾಡಾ ಜಯ, ಶರ್ಮಿಳಾ ದೇವಿ, ಅಮನ್‌ದೀಪ್ ಕೌರ್, ಐಶ್ವರ್ಯಾ ಚವಾಣ್, ಲಾಲ್‌ರೆಮ್‌ಸಿಯಾಮಿ, ಸೋನಾಲ್ ತಿವಾರಿ, ಮನೀಶಾ ಧವಳ್ ಹಾಗೂ ಅಲ್ಕಾ ಡುಂಗ್ ಡುಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News