ಅಪ್ಪ-ಮಗನನ್ನು ಔಟ್ ಮಾಡಿದ ಎಂ.ಎಸ್. ಧೋನಿ!
Update: 2019-04-27 16:34 IST
ಚೆನ್ನೈ,. ಎ.27: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ರಾಯಲ್ಸ್ ತಂಡದ 17 ವರ್ಷದ ಆಟಗಾರ ರಿಯಾನ್ ಪನಗ್ ರ ಕ್ಯಾಚ್ ಹಿಡಿದು ಔಟ್ ಮಾಡಿದ್ದರು.
ಅಚ್ಚರಿಯೆಂದರೆ 19 ವರ್ಷಗಳ ಹಿಂದೆ ಆಗಷ್ಟೇ ಬಿಹಾರ ರಣಜಿ ತಂಡದ ಪರ ಆಡುತ್ತಿದ್ದ ಧೋನಿ ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ರಿಯಾನ್ ತಂದೆ ಪರಾಗ್ ದಾಸ್ ಅವರನ್ನು ಸ್ಟಂಪ್ ಔಟ್ ಮಾಡಿದ್ದರು. ಇದು ಅಚ್ಚರಿಯಾದರೂ ನಿಜ. ಈ ರೀತಿಯಾಗಿ ತಮ್ಮ ಕ್ರಿಕೆಟ್ ಜೀವನದಲ್ಲಿ ತಂದೆ-ಮಗ ಇಬ್ಬರನ್ನೂ ಔಟ್ ಮಾಡಿದ ಶ್ರೇಯ ಧೋನಿಗೆ ಸಲ್ಲುತ್ತದೆ.
ಪ್ರಾಯಶಃ ಕ್ರಿಕೆಟ್ ಇತಿಹಾಸದಲ್ಲಿಯೇ ಹೀಗೆ ಒಬ್ಬ ಆಟಗಾರ ತನ್ನ ವೃತ್ತಿ ಜೀವನದ ಬೇರೆ ಬೇರೆ ಹಂತಗಳಲ್ಲಿ ತಂದೆ-ಮಗನನ್ನು ಔಟ್ ಮಾಡಿರುವ ವಿದ್ಯಮಾನ ಬಹಳ ವಿರಳವೆಂದೇ ಹೇಳಬಹುದು.