×
Ad

ಗುರುಪ್ರೀತ್ ಸಿಂಗ್‌ಗೆ ಬೆಳ್ಳಿ ಪದಕ

Update: 2019-04-28 00:13 IST

ಕ್ಸಿಯಾನ್(ಚೀನಾ), ಎ.27: ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಗ್ರೀಕೊ-ರೊಮನ್ 77 ಕೆಜಿ ತೂಕ ವಿಭಾಗದಲ್ಲಿ ಭಾರತದ ಗುರುಪ್ರೀತ್ ಸಿಂಗ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಕೊರಿಯಾದ ಹಿಯೊನ್‌ವೂ ಕಿಮ್ ವಿರುದ್ಧ 0-8 ಅಂತರದಿಂದ ಸೋತಿರುವ ಗುರುಪ್ರೀತ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು. ಗುರುಪ್ರೀತ್ ಫೈನಲ್ ಹಾದಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದು, ಕ್ವಾರ್ಟರ್ ಫೈನಲ್‌ನಲ್ಲಿ ಖತರ್‌ನ ಬಖಿತ್ ಶರೀಫ್‌ರನ್ನು 10-0 ಅಂತರದಿಂದ ಸೋಲಿಸಿದ್ದರು. ಅಂತಿಮ-4ರ ಸುತ್ತಿನಲ್ಲಿ ಕಝಕ್‌ಸ್ತಾನದ ತಮರ್ಲನ್ ಶಾದುಕಯೆವ್ ಎದುರು 6-5 ಅಂತರದಿಂದ ರೋಚಕ ಜಯ ಸಾಧಿಸಿದರು.

87 ಕೆಜಿ ತೂಕ ವಿಭಾಗದ ಸೆಮಿ ಫೈನಲ್‌ನಲ್ಲಿ ಕಝಕ್‌ಸ್ತಾನದ ಅಝ್ಮತ್ ಕುಸ್ತುಬಯೆವ್‌ರನ್ನು 6-6 ಅಂತರದಿಂದ ಸೋಲಿಸಿದ ಸುನೀಲ್ ಕುಮಾರ್ ಫೈನಲ್‌ಗೆ ತಲುಪಿದರು. ಫೈಲ್‌ನಲ್ಲಿ ಇರಾನ್‌ನ ಹುಸೇನ್ ಅಹ್ಮದ್‌ರನ್ನು ಎದುರಿಸಲಿದ್ದಾರೆ. ಭಾರತದ ಇನ್ನೋರ್ವ ಕುಸ್ತಿಪಟು ಪ್ರೇಮ್ 130 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆಯುವ ಪ್ಲೇ-ಆಫ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಪ್ಲೇ-ಆಫ್‌ನಲ್ಲಿ ಕಝಕ್‌ಸ್ತಾನದ ಡಮಿರ್ ಕುಝೆಂಬಯೆವ್‌ರನ್ನು ಎದುರಿಸಲಿದ್ದಾರೆ. ಕ್ರಮವಾಗಿ 55 ಕೆಜಿ ಹಾಗೂ 63 ಕೆಜಿ ತೂಕ ವಿಭಾಗಗಳಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಮಂಜೀತ್ ಹಾಗೂ ವಿಕ್ರಂ ಕುರಾಡೆ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಶರಣಾಗಿ ಟೂರ್ನಮೆಂಟ್‌ನಿಂದ ಹೊರಬಿದ್ದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News