×
Ad

ಪದಕಪಟ್ಟಿಯಲ್ಲಿ ಭಾರತಕ್ಕೆ ಅಗ್ರ ಸ್ಥಾನ

Update: 2019-04-28 23:51 IST

ಬೀಜಿಂಗ್, ಎ.28: ಶೂಟಿಂಗ್ ವಿಶ್ವಕಪ್‌ನ ಕೊನೆಯ ದಿನವಾದ ರವಿವಾರ ಭಾರತ ಯಾವುದೇ ಪದಕ ಜಯಿಸಲಿಲ್ಲ. ಆದಾಗ್ಯೂ ಸತತ ಎರಡನೇ ವಿಶ್ವಕಪ್‌ನಲ್ಲಿ ಪದಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಪ್ರಸ್ತುತ ವಿಶ್ವಕಪ್‌ನ ರೈಫಲ್/ಪಿಸ್ತೂಲ್ ಸ್ಪರ್ಧೆ ಯಲ್ಲಿ ಭಾರತ ಮೂರು ಚಿನ್ನ ಹಾಗೂ 1 ಬೆಳ್ಳಿ ಜಯಿಸಿದೆ.

ಪದಕ ಪಟ್ಟಿಯಲ್ಲಿ ಭಾರತ ಆತಿಥೇಯ ಚೀನಾ ತಂಡವನ್ನು ಹಿಂದಿಕ್ಕಿದೆ. ಒಟ್ಟು 5 ಪದಕ ಜಯಿಸಿರುವ ಚೀನಾ(2 ಚಿನ್ನ, 2 ಬೆಳ್ಳಿ, 1 ಕಂಚು) ಎರಡನೇ ಸ್ಥಾನದಲ್ಲಿದೆ. ಹೊಸದಿಲ್ಲಿಯಲ್ಲಿ ನಡೆದಕಳೆದ ಆವೃತ್ತಿಯ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡ ಹಂಗೇರಿ ಯೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿತ್ತು.

ಭಾರತದ ಪರ 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಅಂಜುಮ್ ವೌದ್ಗಿಲ್ ಹಾಗೂ ದಿವ್ಯಾಂಶ್ ಸಿಂಗ್ ಚಿನ್ನ ಜಯಿಸಿ ಪದಕದ

ೇಟೆ ಆರಂಭಿಸಿದರು. 10 ಮೀ. ಏರ್ ಪಿಸ್ತೂಲ್ ಮಿಕ್ಸೆಡ್ ಟೀಮ್ ಸ್ಪರ್ಧೆಯಲ್ಲಿ ಯುವ ಜೋಡಿ ಮನು ಭಾಕರ್ ಹಾಗೂ ಸೌರಭ್ ಚೌಧರಿ ಚಿನ್ನದ ಪದಕ ಜಯಿಸಿದರು.

ದಿವ್ಯಾಂಶ್ ಶುಕ್ರವಾರ ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಬೆಳ್ಳಿ ಜಯಿಸಿದರು. ಈ ಮೂಲಕ ಭಾರತಕ್ಕೆ ವೈಯಕ್ತಿಕ ವಿಭಾಗದಲ್ಲಿ ಮೊದಲ ಪದಕ ಗೆದ್ದುಕೊಟ್ಟರು. ಅಭಿಷೇಕ್ ವರ್ಮಾ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಚಿನ್ನ ಗೆದ್ದುಕೊಟ್ಟರು.

ಟೂರ್ನಿಯಲ್ಲಿ ಭಾರತದ ಆಸಕ್ತಿ ಅರ್ಹತಾ ಸುತ್ತಿನ ಹಂತದಲ್ಲೇ ಸೀಮಿತಗೊಂಡಿತು. ಮನು ಭಾಕರ್ ಅರ್ಹತಾ ಸುತ್ತಿನಲ್ಲಿ 586 ಅಂಕ ಗಳಿಸಿ 17ನೇ ಸ್ಥಾನ ಪಡೆದ ಕಾರಣ ಅವರ ಫೈನಲ್ ಆಸೆನುಚ್ಚುನೂರಾಯಿತು. ಏಶ್ಯನ್ ಗೇಮ್ಸ್ ಚಾಂಪಿ ಯನ್ ರಾಹಿ ಸರ್ನೊಬಾಟ್ 579 ಅಂಕ ಗಳಿಸಿ 26ನೇ ಸ್ಥಾನ ಪಡೆದರು. 570 ಅಂಕ ಗಳಿಸಿದ್ದ ಚಿಂಕಿ ಯಾದವ್ 56ನೇ ಸ್ಥಾನಕ್ಕೆ ತೃಪ್ತಿಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News