×
Ad

ಕ್ಲಬ್ ಫುಟ್ಬಾಲ್‌ನಲ್ಲಿ 600ನೇ ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

Update: 2019-04-28 23:55 IST

ರೋಮ್, ಎ.28: ಕ್ಲಬ್ ಫುಟ್ಬಾಲ್ ವೃತ್ತಿಜೀವನದಲ್ಲಿ 600ನೇ ಗೋಲು ಗಳಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಇಟಾಲಿಯನ್ ಚಾಂಪಿಯನ್ ಜುವೆಂಟಸ್ ತಂಡ ಸಿರೀಸ್ ಎ ಫುಟ್ಬಾಲ್ ಟೂರ್ನಿಯಲ್ಲಿ ಇಂಟರ್ ಮಿಲನ್ ವಿರುದ್ಧ 1-1 ರಿಂದ ಡ್ರಾ ಸಾಧಿಸಲು ನೆರವಾದರು.

ಕಳೆದ ವಾರ ಸತತ 8ನೇ ಲೀಗ್ ಪ್ರಶಸ್ತಿಯನ್ನು ಜಯಿಸಿರುವ ಜುವೆಂಟಸ್ ತಂಡಕ್ಕೆ ಇಂಟರ್‌ಮಿಲನ್ ಆರಂಭದಲ್ಲೇ ಆಘಾತ ನೀಡಿ 1-0 ಮುನ್ನಡೆ ಸಾಧಿಸಿತು. ಮಿಡ್ ಫೀಲ್ಡರ್ ರಾಡ್ಜಾ ನೈನ್‌ಗೊಲನ್, ಮಿಲನ್‌ಗೆ ಮುನ್ನಡೆ ಒದಗಿಸಿಕೊಟ್ಟರು. 62ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರೊನಾಲ್ಡೊ ಗೋಲನ್ನು 1-1 ರಿಂದ ಸಮಬಲಗೊಳಿಸಿದರು.

34ರ ಹರೆಯದ ರೊನಾಲ್ಡೊ ಕ್ಲಬ್ ವೃತ್ತಿಜೀವನದಲ್ಲಿ 600ನೇ ಗೋಲು ಗಳಿಸಿದರು. ರಿಯಲ್ ಮ್ಯಾಡ್ರಿಡ್ ಪರ 450 ಗೋಲು ಗಳಿಸಿರುವ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್(118), ಜುವೆಂಟಸ್(27) ಹಾಗೂ ಸ್ಫೋರ್ಟಿಂಗ್ ಲಿಸ್ಬನ್(5)ಪರವಾಗಿಯೂ ಗೋಲು ಗಳಿಸಿದ್ದಾರೆ. ಪೋರ್ಚುಗಲ್ ಫುಟ್ಬಾಲ್ ತಂಡದ ಆಟಗಾರ ರೊನಾಲ್ಡೊ ಕ್ಲಬ್ ಫುಟ್ಬಾಲ್‌ನ ಗೋಲು ಗಳಿಕೆಯಲ್ಲಿ ಬಾರ್ಸಿಲೋನದ ನಾಯಕ ಲಿಯೊನೆಲ್ ಮೆಸ್ಸಿ(598ನೇ)ಗಿಂತ ಸ್ವಲ್ಪ ಮುಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News