×
Ad

ಟಿ-20 ಕ್ರಿಕೆಟ್‌ನಲ್ಲಿ ಗೆಲುವಿನ ‘ಶತಕ’ ಪೂರೈಸಿದ ಕೆಕೆಆರ್

Update: 2019-04-29 23:53 IST

ಕೋಲ್ಕತಾ, ಎ.29: ಗೆಲುವಿನ ಹಾದಿಗೆ ಮರಳಿರುವ ಕೋಲ್ಕತಾ ನೈಟ್ ರೈಡರ್ಸ್ ರವಿವಾರ ಈಡನ್‌ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 34 ರನ್‌ಗಳಿಂದ ಮಣಿಸಿತು. ಈ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 100ನೇ ಗೆಲುವು ಸಾಧಿಸಿತು.

2008ರಲ್ಲಿ ನಡೆದ ಮೊದಲ ಆವೃತ್ತಿಯ ಐಪಿಎಲ್‌ನಿಂದ ತೊಡಗಿ ಈ ತನಕ ಕೆಕೆಆರ್ 91 ಪಂದ್ಯಗಳನ್ನು ಜಯಿಸಿದೆ. ಚಾಂಪಿಯನ್ಸ್ ಲೀಗ್‌ನಲ್ಲಿ 9 ಪಂದ್ಯಗಳನ್ನು ಜಯಿಸಿದೆ. ರವಿವಾರ ನಡೆದ ಪಂದ್ಯದಲ್ಲಿ ಟಿ-20 ಕ್ರಿಕೆಟ್‌ನಲ್ಲಿ ಬರೋಬ್ಬರಿ 100 ಪಂದ್ಯ ಜಯಿಸಿದ ಸಾಧನೆ ಮಾಡಿದೆ.

ಕೆಕೆಆರ್ ಟಿ-20 ಇತಿಹಾಸದಲ್ಲಿ ಈ ಮೈಲುಗಲ್ಲು ತಲುಪಿದ ಆರನೇ ತಂಡ ಹಾಗೂ ಐಪಿಎಲ್‌ನ 3ನೇ ತಂಡವಾಗಿದೆ. ಮುಂಬೈ ಇಂಡಿಯನ್ಸ್(115), ಚೆನ್ನೈ ಸೂಪರ್ ಕಿಂಗ್ಸ್(113), ಲಂಕಾ ಶೈರ್(104), ನಾಟ್ಟಿಂಗ್‌ಹ್ಯಾಮ್‌ಶೈರ್(103) ಹಾಗೂ ವಾರ್ವಿಕ್‌ಶೈರ್(101)ತಂಡಗಳು ಟಿ-20 ಕ್ರಿಕೆಟ್‌ನಲ್ಲಿ 100ಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಜಯ ದಾಖಲಿಸಿವೆ.

ಮುಂಬೈ ವಿರುದ್ಧ ಗೆಲುವಿನೊಂದಿಗೆ ಕೆಕೆಆರ್ ತಂಡ ಸತತ ಆರು ಪಂದ್ಯಗಳ ಸೋಲಿನಿಂದ ಹೊರ ಬಂದಿರುವುದಲ್ಲದೆ ಪ್ಲೇ-ಆಫ್ ಸುತ್ತಿಗೇರುವ ವಿಶ್ವಾಸವನ್ನು ಜೀವಂತವಾಗಿಸಿಕೊಂಡಿದೆ. ಮುಂಬೈ ಎದುರು ಕೋಲ್ಕತಾ ತಂಡ 2 ವಿಕೆಟ್ ನಷ್ಟಕ್ಕೆ 232 ರನ್ ಗಳಿಸಿ ಈ ಋತುವಿನಲ್ಲಿ ಗರಿಷ್ಠ ಮೊತ್ತ ಕಲೆ ಹಾಕಿತು. ಶುಭಮನ್ ಗಿಲ್(75 ರನ್, 45 ಎಸೆತ) ಹಾಗೂ ಆ್ಯಂಡ್ರೆ ರಸೆಲ್(ಔಟಾಗದೆ 80, 40 ಎಸೆತ)ಕೋಲ್ಕತಾ ಬೃಹತ್ ಮೊತ್ತಕ್ಕೆ ಕಾಣಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News