×
Ad

32ರ ಹರೆಯಕ್ಕೆ ಕಾಲಿರಿಸಿದ ರೋಹಿತ್ ಶರ್ಮಾ

Update: 2019-05-01 00:01 IST

ಮುಂಬೈ, ಎ.30:ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಅವರು ಮಂಗಳವಾರ 32ನೇ ವರ್ಷಕ್ಕೆ ಕಾಲಿರಿಸಿದ್ದಾರೆ.

ಈ ಸಂದರ್ಭದಲ್ಲಿ ಖ್ಯಾತ ಕ್ರಿಕೆಟಿಗರು, ಹಾಲಿ, ಮಾಜಿ ಕ್ರಿಕೆಟಿಗರು ರೋಹಿತ್ ಶರ್ಮಾರಿಗೆ ಟ್ವಿಟರ್‌ನಲ್ಲಿ ಜನ್ಮ ದಿನದ ಶುಭ ಹಾರೈಸಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ದ್ವಿಶತಕದ ದಾಖಲೆ ನಿರ್ಮಿಸಿರುವ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್(264) ನಿರ್ಮಿಸಿದ್ದಾರೆ.

ಐಪಿಎಲ್‌ನಲ್ಲಿ ಮೂರು ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಪಟ್ಟ ಪಡೆಯುವಲ್ಲಿ ನಾಯಕರಾಗಿ ಮುನ್ನಡೆಸಿದ್ದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 4 ಶತಕ ಮತ್ತು 19 ಬಾರಿ 50ಕ್ಕಿಂತ ಅಧಿಕ ರನ್ ದಾಖಲಿಸಿರುವ ಏಕೈಕ ದಾಂಡಿಗ ಎಂಬ ದಾಖಲೆ ಬರೆದಿದ್ದಾರೆ.

2013ರಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್‌ನಲ್ಲಿ 177 ರನ್ ದಾಖಲಿಸಿದ್ದರು. ಎರಡನೇ ಟೆಸ್ಟ್‌ನಲ್ಲಿ ಅಜೇಯ 111 ರನ್ ದಾಖಲಿಸುವ ಮೂಲಕ ಮೊದಲ ಎರಡು ಟೆಸ್ಟ್‌ಗಳಲ್ಲಿ ಸತತ ಶತಕ ದಾಖಲಿಸಿದ ಮೂರನೇ ಕ್ರಿಕೆಟಿಗ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News