ಐಪಿಎಲ್ ಟ್ವೆಂಟಿ-20: ರಾಜಸ್ಥಾನದ ಗೆಲುವಿಗೆ 63 ರನ್ ಸವಾಲು
ಬೆಂಗಳೂರು, ಎ. 30: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವೆ ಐಪಿಎಲ್ ಟ್ವೆಂಟಿ-20 ಟೂರ್ನಿಯ 49ನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.
20 ಓವರ್‌ಗಳ ಪಂದ್ಯ 5 ಓವರ್‌ಗಳಿಗೆ ಕಡಿತಗೊಂಡಿತು. ಆರ್‌ಸಿಬಿ ಐದು ಓವರ್‌ಗಳಲ್ಲಿ 7 ವಿಕೆಟ್ ನಷ್ಟಲ್ಲಿ 62 ರನ್‌ಗಳಿಸಿದೆ.
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ರಾತ್ರಿ 8 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ 11:20ಕ್ಕೆ ಆರಂಭಗೊಂಡಿತು. 5 ಓವರ್‌ಗಳ ಪಂದ್ಯದ ಮೊದಲ ಓವರ್‌ನಲ್ಲಿ ಆರ್‌ಸಿಬಿ ತಂಡದ ಆರಂಭಿಕ ದಾಂಡಿಗ ವಿರಾಟ್ ಕೊಹ್ಲಿ ಮತ್ತು ಎಬಿ ಡೆವಿಲಿಯರ್ಸ್ ಅವರು ಮೊದಲ ಓವರ್‌ನಲ್ಲಿ 23 ರನ್ ಕಬಳಿಸಿದರು. ವಿರಾಟ್ ಕೊಹ್ಲಿ 3 ಎಸೆತಗಳಲ್ಲಿ 2 ಸಿಕ್ಸರ್ ಒಳಗೊಂಡ 13 ರನ್ ಮತ್ತು ಡೆವಿಲಿಯರ್ಸ್ 2 ಬೌಂಡರಿಗಳನ್ನು ಒಳಗೊಂಡ 10 ರನ್ ಕಬಳಿಸಿದರು. ಬೌಲರ್ ವರುಣ್ ಆ್ಯರೊನ್ ಮೊದಲ ಓವರ್‌ನಲ್ಲಿ ಕೈ ಸುಟ್ಟುಕೊಂಡರು.
ಎರಡನೇ ಓವರ್‌ನಲ್ಲಿ ಶ್ರೇಯಸ್ ಗೋಪಾಲ್ ಅವರು ಕೊಹ್ಲಿ(25), ಡೆವಿಲಿಯರ್ಸ್ (10) ಮತ್ತು ಮಾರ್ಕ್ ಸ್ಟೋನಿಸ್(0)ರನ್ನು ಪೆವಿಲಿಯನ್‌ಗಟ್ಟುವ ಮೂಲಕ ಹ್ಯಾಟ್ರಿಕ್ ಪಡೆದರು. ಗುರುಕೀರತ್ ಸಿಂಗ್ ಮಾನ್(6) ಹೆನ್ರಿಕ್ ಕ್ಲಾಸೆನ್(6), ಪಾರ್ಥಿವ್ ಪಟೇಲ್ (8), ಪವನ್ ನೇಗಿ (4) ಔಟಾಗಿದ್ದಾರೆ.
ಶ್ರೇಯಸ್ ಗೋಪಾಲ್ 12ಕ್ಕೆ 3 ವಿಕೆಟ್, ಒಶಾನೆ ಥಾಮಸ್ 6ಕ್ಕೆ 2, ರಿಯಾನ್ ಪರಾಗ್ ಮತ್ತು ಜಯದೇವ್ ಉನದ್ಕಟ್ 1 ವಿಕೆಟ್ ಪಡೆದರು.