×
Ad

ಭಾರತೀಯ ಮಹಿಳಾ ಫುಟ್ಬಾಲ್ ಲೀಗ್ ರವಿವಾರ ಆರಂಭ

Update: 2019-05-03 23:34 IST

ಲುಧಿಯಾನ, ಮೇ 3: ಭಾರತೀಯ ಮಹಿಳಾ ಫುಟ್ಬಾಲ್ ಲೀಗ್ ರವಿವಾರ ಇಲ್ಲಿ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರೈಸಿಂಗ್ ಸ್ಟೂಡೆಂಟ್ಸ್ ಕ್ಲಬ್ ಗೋಕುಲಂ ಕೇರಳ ಎಫ್‌ಸಿ ತಂಡವನ್ನು ಎದುರಿಸಲಿದೆ.

ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುವ 12 ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ಎರಡು ಗುಂಪಿನಲ್ಲಿ ತಲಾ 6 ತಂಡಗಳಿವೆ. ಗ್ರೂಪ್-1ರಲ್ಲಿ ರೈಸಿಂಗ್ ಸ್ಟೂಡೆಂಟ್ಸ್ ಕ್ಲಬ್, ಗೋಕುಲಂ, ಅಲ್ಖಾಪುರ, ಹಾನ್ಸ್ ವುಮನ್ ಫುಟ್ಬಾಲ್ ಕ್ಲಬ್, ಸೆಂಟ್ರಲ್ ಎಸ್‌ಎಸ್‌ಬಿ ಮಹಿಳಾ ಫುಟ್ಬಾಲ್ ಕ್ಲಬ್ ಹಾಗೂ ಪಂಜಿಮ್ ಫುಟ್ಬಾಲರ್ಸ್ ತಂಡಗಳಿವೆ.

ಗ್ರೂಪ್-2ರಲ್ಲಿ ಮಣಿಪುರ ಪೊಲೀಸ್, ಸೇಥು ಎಫ್‌ಸಿ, ಬೆಂಗಳೂರು ಯುನೈಟೆಡ್ ಎಫ್‌ಸಿ, ಸಾಯ್-ಎಸ್‌ಟಿಸಿ ಕಟಕ್, ಕೋಲ್ಹಾಪುರ ಸಿಟಿ ಹಾಗೂ ಬರೋಡಾ ಫುಟ್ಬಾಲ್ ಅಕಾಡಮಿಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News