ಅಗ್ರ ಸ್ಥಾನ ಕಾಯ್ದುಕೊಳ್ಳಲು ಚೆನ್ನೈ ಚಿತ್ತ

Update: 2019-05-04 17:52 GMT

ಮೊಹಾಲಿ, ಮೇ 4: ಈಗಾಗಲೇ ಐಪಿಎಲ್‌ನ ಪ್ಲೇ-ಆಫ್ ಸುತ್ತಿಗೆ ತೇರ್ಗಡೆಯಾಗಿರುವ ಚೆನ್ನೈ ತಂಡ ಮೊಹಾಲಿಯಲ್ಲಿ ರವಿವಾರ ನಡೆಯುವ ಐಪಿಎಲ್‌ನ ಕೊನೆಯ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಪಂಜಾಬ್‌ನ್ನು ಎದುರಿಸಲಿದೆ. ಈ ಹಿಂದಿನ ಪಂದ್ಯದಲ್ಲಿ ಮುಂಬೈಗೆ ಶರಣಾಗಿದ್ದ ಚೆನ್ನೈ ಕಳೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ 80 ರನ್‌ಗಳಿಂದ ಜಯ ಸಾಧಿಸಿ ಗೆಲುವಿನ ಹಳಿಗೆ ಮರಳಿತ್ತು. ಮತ್ತೊಮ್ಮೆ ನಂ.1 ಸ್ಥಾನ ಪಡೆದಿತ್ತು.

ಮುಂಬೈ ಎದುರು ಭಾರೀ ಅಂತರದ ಸೋಲಿನಿಂದಾಗಿ ಚೆನ್ನೈ ರನ್‌ರೇಟ್ ಕುಸಿದಿದೆ. ಇನ್ನು ಒಂದು ಪಂದ್ಯ ಆಡಲಿರುವ ಹಾಲಿ ಚಾಂಪಿಯನ್ ಚೆನ್ನೈ ಗೆಲುವಿನ ಓಟ ಮುಂದುವರಿಸಿ ಅಗ್ರ ಸ್ಥಾನ ಭದ್ರಪಡಿಸಿಕೊಳ್ಳಲು ಎದುರು ನೋಡುತ್ತಿದೆ. 13 ಪಂದ್ಯಗಳಲ್ಲಿ 18 ಅಂಕ ಗಳಿಸಿರುವ ಚೆನ್ನೈ ತಂಡ ರವಿವಾರ ಜಯ ಸಾಧಿಸಿದರೆ ಒಟ್ಟು 20 ಅಂಕ ಗಳಿಸಲಿದೆ. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಬಿದ್ದಿರುವ ಪಂಜಾಬ್ ಕೇವಲ ಪ್ರತಿಷ್ಠೆಗಾಗಿ ಆಡಲಿದೆ. 13 ಪಂದ್ಯಗಳಲ್ಲಿ ಕೇವಲ 10 ಅಂಕ ಗಳಿಸಿರುವ ಪಂಜಾಬ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News