ಅಫ್ಘಾನ್ ಪತ್ರಕರ್ತೆಯ ಗುಂಡು ಹಾರಿಸಿ ಹತ್ಯೆ

Update: 2019-05-11 17:06 GMT

ಕಾಬೂಲ್, ಮೇ 11: ಸಂಸತ್ತಿನ ಸಾಂಸ್ಕೃತಿಕ ಸಲಹೆಗಾರರಾಗಿದ್ದ ಅಫ್ಘಾನಿಸ್ತಾನದ ಪತ್ರಕರ್ತೆಯೊಬ್ಬರನ್ನು ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ಅಪರಿಚಿತ ಬಂದೂಕುಧಾರಿಗಳು ಗುಂಡು ಹಾರಿಸಿ ಕೊಂದಿದ್ದಾರೆ.

ಮೂರು ಸ್ಥಳೀಯ ಟಿವಿ ವಾಹಿನಿಗಳಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಮಿನಾ ಮಂಗಲ್ ಮೇಲೆ ಹಂತಕರು ಶನಿವಾರ ಬೆಳಗ್ಗೆ ದಾಳಿ ಮಾಡಿದರು ಎಂದು ‘ಟೋಲೊ ನ್ಯೂಸ್’ ವರದಿ ಮಾಡಿದೆ.

ಹತ್ಯೆ ನಡೆಸಿದ ಬಳಿಕ ಹಂತಕರು ಪರಾರಿಯಾಗಿದ್ದಾರೆ.

ಈ ವರ್ಷ ನಡೆದ ಆಕ್ರಮಣಗಳಲ್ಲಿ ಅಫ್ಘಾನಿಸ್ತಾನದ ಒಟ್ಟು 15 ಪತ್ರಕರ್ತರು ಹತರಾಗಿದ್ದಾರೆ. ಅವರ ಪೈಕಿ ಒಂಬತ್ತು ಮಂದಿ ಒಂದೇ ದಿನದಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News