ದಕ್ಷಿಣ ಆಫ್ರಿಕ ಚುನಾವಣೆ: ಎಎನ್‌ಸಿಗೆ ಸ್ಪಷ್ಟ ಬಹುಮತ

Update: 2019-05-11 17:12 GMT

ಪ್ರಿಟೋರಿಯ (ದಕ್ಷಿಣ ಆಫ್ರಿಕ), ಮೇ 11: ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸ ಅವರ ಆಫ್ರಿಕನ್ ನ್ಯಾಶನಲ್ ಕಾಂಗ್ರೆಸ್ (ಎಎನ್‌ಸಿ) ಬುಧವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಜಯ ಗಳಿಸಿದೆ.

ಆದಾಗ್ಯೂ, ಅದರ ಗೆಲುವಿನ ಅಂತರ ಕಡಿಮೆಯಾಗಿದೆ. ಇದು, 1994ರಲ್ಲಿ ವರ್ಣಭೇದ ನೀತಿ ಕೊನೆಗೊಂಡ ಬಳಿಕ ದಕ್ಷಿಣ ಆಫ್ರಿಕದಲ್ಲಿ ನಡೆದ ಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ನೆಲ್ಸನ್ ಮಂಡೇಲಾ ನೇತೃತ್ವದ ಪಕ್ಷ ಗಳಿಸಿದ ವಿಜಯದ ಬಳಿಕ, ಆ ಪಕ್ಷದ ಅತ್ಯಂತ ಕಳಪೆ ಸಾಧನೆಯಾಗಿದೆ.

 ಶುಕ್ರವಾರ ಮತ ಎಣಿಕೆ ಆರಂಭವಾಗಿದ್ದು, 95 ಶೇಕಡದಷ್ಟು ಮತಗಳ ಎಣಿಕೆ ಪೂರ್ಣಗೊಂಡಾಗ ಎಎನ್‌ಸಿ 57.73 ಶೇಕಡ ಮತಗಳನ್ನು ಪಡೆದು ಆರಾಮದಾಯಕ ಮುನ್ನಡೆಯಲ್ಲಿತ್ತು.

ಮತ ಹಂಚಿಕೆ ಆಧಾರದಲ್ಲಿ ಸಂಸತ್ತಿನಲ್ಲಿ ಸ್ಥಾನಗಳನ್ನು ನೀಡಲಾಗುವುದು ಹಾಗೂ ಅತಿ ಹೆಚ್ಚಿನ ಪ್ರತಿನಿಧಿಗಳನ್ನು ಒಳಗೊಂಡ ಪಕ್ಷವು ಅಧ್ಯಕ್ಷರನ್ನು ಆಯ್ಕೆ ಮಾಡುವುದು. ಅಧ್ಯಕ್ಷರು ಮೇ 25ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News