ಚೆನ್ನೈ ಗೆಲುವಿಗೆ 150 ರನ್‌ಗಳ ಸವಾಲು

Update: 2019-05-12 16:25 GMT

ಚೆನ್ನೈ,ಮೇ: 12: ಐಪಿಎಲ್ ಟ್ವೆಂಟಿ-20 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆಲುವಿಗೆ 150 ರನ್‌ಗಳ ಸವಾಲನ್ನು ಪಡೆದಿದೆ.

ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿದೆ.

ಚೆನ್ನೈಗೆ ಕಠಿಣ ಸವಾಲು ವಿಧಿಸುವ ಪ್ರಯತ್ನಕ್ಕೆ ಮುಂಬೈಗೆ ಆರಂಭದಲ್ಲೇ ಹಿನ್ನಡೆ ಉಂಟಾಯಿತು. ನಾಯಕ ರೋಹಿತ್ ಶರ್ಮಾ ಅವರ ಲೆಕ್ಕಾಚಾರ ತಲೆಕೆಳಗಾಯಿತು. ಆದರೆ ಕೀರನ್ ಪೊಲಾರ್ಡ್ 25 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 41 ರನ್ ಸೇರಿಸಿ ತಂಡಕ್ಕೆ ಸ್ಪರ್ಧಾತ್ಮಕ ಸವಾಲು ಸೇರಿಸಲು ನೆರವಾದರು.

 ನಾಯಕ ರೋಹಿತ್ ಶರ್ಮಾ ಮತ್ತು ಕ್ವಿಂಟನ್ ಡೆ ಕಾಕ್ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 4.5 ಓವರ್‌ಗಳಲ್ಲಿ 45 ರನ್ ಸೇರಿಸಿದರು.ಇವರ ಬ್ಯಾಟಿಂಗ್ ನೋಡಿದರೆ ಮುಂಬೈ ತಂಡದ ಬ್ಯಾಟಿಂಗ್ ಭರ್ಜರಿಯಾಗುವ ಸಾಧ್ಯತೆ ಕಂಡು ಬಂದಿತ್ತು. ಆದರೆ ತಂಡದ ಸಹಾ ಆಟಗಾರರು ಸ್ಫೋಟಕ ಬ್ಯಾಟಿಂಗ್ ನಡೆಸಲು ವಿಫಲರಾದರು. ಡೆ ಕಾಕ್ 17 ಎಸೆತಗಳಲ್ಲಿ 4 ಸಿಕ್ಸರ್ ಒಳಗೊಂಡ 29 ರನ್ ಸೇರಿಸಿದರು. ರೋಹಿತ್ ಶರ್ಮಾ 14 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 1 ಬೌಂಡರಿ ಒಳಗೊಂಡ 15 ರನ್ ಜಮೆ ಮಾಡಿದರು.

ಸೂರ್ಯಕುಮಾರ್ ಯಾದವ್ 15 ರನ್, ಇಶಾನ್ ಕಿಶನ್ 23 ರನ್ ಕೊಡುಗೆ ನೀಡಿದರು. ಕೃನಾಲ್ ಪಾಂಡ್ಯ 7 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿದರು. ರಾಹುಲ್ ಚಹಾರ್ ಮತ್ತು ಮಿಚೆಲ್ ಮೆಕ್ಲೀಗನ್ ಖಾತೆ ತೆರೆಯಲಿಲ್ಲ.

ಚೆನ್ನೈ ತಂಡದ ದೀಪಕ್ ಚಹಾರ್ 26ಕ್ಕೆ 3 ವಿಕೆಟ್, ಶಾರ್ದುಲ್ ಠಾಕೂರ್ ಮತ್ತು ಇಮ್ರಾನ್ ತಾಹಿರ್ ಲಾ 2 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News