ಅಂಪೈರ್ ನಿರ್ಧಾರಕ್ಕೆ ಅಸಮಾಧಾನ :ಪೊಲಾರ್ಡ್‌ಗೆ ದಂಡ

Update: 2019-05-13 08:37 GMT

ಹೈದರಾಬಾದ್, ಮೇ 13: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರವಿವಾರ ನಡೆದ ಫೈನಲ್ ಪಂದ್ಯದ ವೇಳೆ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕಿರೊನ್ ಪೊಲಾರ್ಡ್‌ಗೆ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ದಂಡ ವಿಧಿಸಲಾಗಿದೆ.

ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ ವ್ಯಕ್ತಪಡಿಸಿರುವ ಪೊಲಾರ್ಡ್,ಆಟಗಾರರು ಹಾಗೂ ತಂಡದ ಅಧಿಕಾರಿಗಳಿಗೆ ರೂಪಿಸಲಾಗಿರುವ ಐಪಿಎಲ್ ನೀತಿ ಸಂಹಿತೆ ಲೆವೆಲ್ 1 ಅಫೆನ್ಸ್ 2.8ನ್ನು ಉಲ್ಲಂಘಿಸಿದ್ದಾರೆ. ಐಪಿಎಲ್ ನೀತಿ ಸಂಹಿತೆಯ ಲೆವೆಲ್-1ನ್ನು ಉಲ್ಲಂಘಿಸಿದರೆ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್‌ರ ನಿರ್ಧಾರವೇ ಅಂತಿಮವಾಗುತ್ತದೆ.

 ಮುಂಬೈ ಇನಿಂಗ್ಸ್ ವೇಳೆ ಚೆನ್ನೈ ಪರ ಅಂತಿಮ ಓವರ್ ಬೌಲಿಂಗ್ ಮಾಡಿದ್ದ ಡ್ವೇಯ್ನ್ ಬ್ರಾವೊ ಸತತ ಮೂರು ಬಾರಿ ವೈಡ್ ಬಾಲ್‌ಗೆ ಮಾಡಲಾಗಿರುವ ಗುರುತಿನ ಹೊರಗೆ ಚೆಂಡನ್ನು ಎಸೆದಿದ್ದರು. ಮೂರು ಎಸೆತಗಳು ಡಾಟ್ ಬಾಲ್ ಆಗಿತ್ತು. ಮೂರು ಬಾರಿಯೂ ಸ್ಟ್ರೈಟ್ ಅಂಪೈರ್ ನಿತಿನ್ ಮೆನನ್ ಅವರು ಪೊಲಾರ್ಡ್ ನಿರೀಕ್ಷೆ ಮಾಡಿರುವ ಪ್ರಕಾರ ವೈಡ್ ಸಿಗ್ನಲ್ ನೀಡಿರಲಿಲ್ಲ. ಈ ಕಾರಣಕ್ಕೆ ಪೊಲಾರ್ಡ್ ಅವರು ಅಂಪೈರ್‌ರೊಂದಿಗೆ ತನ್ನ ಅಸಮಾಧಾನ ತೋಡಿಕೊಂಡರು. ಮಾತ್ರವಲ್ಲ ಗಾಳಿಯಲ್ಲಿ ತನ್ನ ಬ್ಯಾಟನ್ನು ಮೇಲಕ್ಕೆ ಎಸೆದು ಹತಾಶೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News