ಅಸಾಂಜ್ ವಿರುದ್ಧದ ಅತ್ಯಾಚಾರ ಪ್ರಕರಣ ಪುನರಾರಂಭ: ಸ್ವೀಡನ್

Update: 2019-05-13 18:15 GMT

ಸ್ಟಾಕ್‌ಹೋಮ್ (ಸ್ವೀಡನ್), ಮೇ 13: ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ವಿರುದ್ಧದ 2010ರ ಅತ್ಯಾಚಾರ ಆರೋಪದ ತನಿಖೆಯನ್ನು ಪುನರಾರಂಭಿಸುವುದಾಗಿ ಸ್ವೀಡನ್ ಪ್ರಾಸಿಕ್ಯೂಟರ್‌ಗಳು ಸೋಮವಾರ ಹೇಳಿದ್ದಾರೆ.

  ಪ್ರಕರಣದ ಕಾನೂನು ಮಿತಿಯು 2020 ಆಗಸ್ಟ್ 20ರಂದು ಮುಗಿಯುವ ಮುನ್ನ ಅಸಾಂಜ್‌ರನ್ನು ಕಾನೂನು ಪ್ರಕ್ರಿಯೆಗೆ ಗುರಿಪಡಿಸುವ ನಿರೀಕ್ಷೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ತನಿಖೆಯನ್ನು ಪುನರಾರಂಭಿಸಲು ನಾನು ಇಂದು ನಿರ್ಧರಿಸಿದ್ದೇನೆ. ಅಸಾಂಜ್ ಅತ್ಯಾಚಾರ ಮಾಡಿದ್ದಾರೆ ಎಂದು ಶಂಕಿಸಲು ಇನ್ನೂ ಸಂಭಾವ್ಯ ಕಾರಣಗಳಿವೆ’’ ಎಂದು ಪಬ್ಲಿಕ್ ಪ್ರಾಸಿಕ್ಯೂಶನ್‌ನ ಉಪ ನಿರ್ದೇಶಕಿ ಎವಾ- ಮಾರೀ ಪರ್ಸನ್ ಸುದ್ದಿಗಾರರಿಗೆ ತಿಳಿಸಿದರು.

 ‘‘ಪ್ರಕರಣವನ್ನು ಕೊನೆಗೊಳಿಸುವ ಮೇ 2017ರ ನಿರ್ಧಾರವನ್ನು ಪುರಾವೆಗಳ ಕೊರತೆಗಾಗಿ ತೆಗೆದುಕೊಳ್ಳಲಾಗಿರಲಿಲ್ಲ. ಬದಲಿಗೆ, ತನಿಖೆಗೆ ತಡೆಯಾದ ಕಾರಣಕ್ಕಾಗಿ ತೆಗೆದುಕೊಳ್ಳಲಾಗಿತ್ತು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News