ಲಂಕಾ ಉಗ್ರ ದಾಳಿ: ಪ್ರಾಂಶುಪಾಲ, ಶಿಕ್ಷಕ ಬಂಧನ

Update: 2019-05-17 18:18 GMT

ಕೊಲಂಬೊ, ಮೇ 17: ಉಗ್ರಗಾಮಿ ಸಂಘಟನೆ ನ್ಯಾಶನಲ್ ತೌಹೀದ್ ಜಮಾಅತ್ (ಎನ್‌ಟಿಜೆ)ನೊಂದಿಗೆ ನಂಟು ಹೊಂದಿರುವ ಆರೋಪದಲ್ಲಿ ಓರ್ವ ಶಾಲಾ ಪ್ರಾಂಶುಪಾಲ ಮತ್ತು ಓರ್ವ ಶಿಕ್ಷಕನನ್ನು ಬಂಧಿಸಿರುವುದಾಗಿ ಶ್ರೀಲಂಕಾ ಪೊಲೀಸರು ಶುಕ್ರವಾರ ಹೇಳಿದಾರೆ.

ಈಸ್ಟರ್ ರವಿವಾರದಂದು ದ್ವೀಪ ರಾಷ್ಟ್ರದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ದಾಳಿಗಳನ್ನು ಎನ್‌ಟಿಜೆ ನಡೆಸಿದೆಯೆಂಬುದಾಗಿ ಆರೋಪಿಸಲಾಗಿದೆ. ಆ ಭಯೋತ್ಪಾದಕ ದಾಳಿಯಲ್ಲಿ ಸುಮಾರು 260 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಅಟವೀರವೇವದಲ್ಲಿರುವ ಶಾಲೆಯ 56 ವರ್ಷದ ಪ್ರಾಂಶುಪಾಲ ನೂರ್ ಮುಹಮ್ಮದ್ ಅದ್ದು ಉಲ್ ಮತ್ತು 47 ವರ್ಷದ ಶಿಕ್ಷಕ ಅಜೀಬುಲ್ ಜಬ್ಬಾರ್‌ನನ್ನು ಗುರುವಾರ ಹೊರೌಪಟ್ಟಣ ನಗರದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News