ತೈವಾನ್: ಸಲಿಂಗ ವಿವಾಹ ಕಾನೂನುಬದ್ಧ

Update: 2019-05-17 18:25 GMT

ತೈಪೆ (ತೈವಾನ್), ಮೇ 17: ತೈವಾನ್ ಶುಕ್ರವಾರ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿದೆ. ಮಸೂದೆಯು ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕಾರಗೊಂಡಿದ್ದು, ಇಂಥ ಮಸೂದೆಯನ್ನು ಅಂಗೀಕರಿಸಿದ ಏಶ್ಯದ ಮೊದಲ ದೇಶವಾಗಿದೆ.

ಸಲಿಂಗ ದಂಪತಿಗಳು ‘‘ವಿಶೇಷ ಖಾಯಂ ಬಂಧ’’ವನ್ನು ರಚಿಸಿಕೊಳ್ಳಲು ಅವಕಾಶ ನೀಡುವ ಮಸೂದೆಯನ್ನು ಸಂಸದರು ಯಾವುದೇ ತಕರಾರಿಲ್ಲದೆ ಅಂಗೀಕರಿಸಿದರು. ಮದುವೆ ನೋಂದಣಿಗಾಗಿ ಸರಕಾರಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲೂ ಅದು ಅವಕಾಶ ನೀಡುತ್ತದೆ.

ಭಾರೀ ಮಳೆಯ ಹೊರತಾಗಿಯೂ, ಸಂಸತ್ತಿನ ಹೊರಗೆ ಸಾವಿರಾರು ಸಲಿಂಗಕಾಮ ಹಕ್ಕುಗಳ ಬೆಂಬಲಿಗರು ನೆರೆದಿದ್ದರು. ಈ ಸುದ್ದಿ ಹರಡುತ್ತಿದ್ದಂತೆಯೇ ಅವರು ಸಂಭ್ರಮಾಚರಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News