ಆಸ್ಟ್ರಿಯದಲ್ಲಿ ‘ದನವನ್ನು ಚುಂಬಿಸುವ’ ಸವಾಲು: ‘ಅಪಾಯಕಾರಿ ಕಿಡಿಗೇಡಿತನ’ ಎಂದ ಸರಕಾರ

Update: 2019-05-17 18:27 GMT

ವಿಯೆನ್ನಾ (ಆಸ್ಟ್ರಿಯ), ಮೇ 17: ದನವನ್ನು ಚುಂಬಿಸುವ ಆನ್‌ಲೈನ್ ಸವಾಲನ್ನು ತೊರೆಯುವಂತೆ ಆಸ್ಟ್ರಿಯ ಸರಕಾರ ಇಂಟರ್‌ನೆಟ್ ಬಳಕೆದಾರರಿಗೆ ಸೂಚನೆ ನೀಡಿದೆ ಹಾಗೂ ಈ ಸವಾಲನ್ನು ‘ಅಪಾಯಕಾರಿ ಕಿಡಿಗೇಡಿತನ’ ಎಂಬುದಾಗಿ ಬಣ್ಣಿಸಿದೆ.

‘ಕ್ಯಾಸಲ್’ ಎಂಬ ಸ್ವಿಟ್ಸರ್‌ಲ್ಯಾಂಡ್‌ನ ಆ್ಯಪೊಂದು ಬುಧವಾರ ‘ಕೌ ಕಿಸ್ ಚಾಲೆಂಜ್’ನ್ನು ಪರಿಚಯಿಸಿತ್ತು. ಪರೋಪಕಾರ ಕೆಲಸಗಳಿಗಾಗಿ ಹಣ ಸಂಗ್ರಹಿಸಲು ದನಗಳಿಗೆ ಚುಂಬಿಸುವಂತೆ ಸ್ವಿಟ್ಸರ್‌ಲ್ಯಾಂಡ್ ಮತ್ತು ಇತರ ಜರ್ಮನ್ ಮಾತನಾಡುವ ದೇಶಗಳ ಇಂಟರ್‌ನೆಟ್ ಬಳಕೆದಾರರನ್ನು ಉತ್ತೇಜಿಸಿತ್ತು.

ಆದರೆ, ಆಸ್ಟ್ರಿಯದ ಕೃಷಿ ಸಚಿವೆ ಎಲಿಝಬೆತ್ ಕೋಸ್ಟಿಂಗರ್ ಈ ಸವಾಲನ್ನು ‘ಅಪಾಯಕಾರಿ ಕಿಡಿಗೇಡಿತನ’ ಎಂಬುದಾಗಿ ಗುರುವಾರ ಹೇಳಿಕೆಯೊಂದರಲ್ಲಿ ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News