ಧೋನಿಯನ್ನು ‘ಆತಂಕವಾದಿ’ ಎಂದು ಕರೆಯುತ್ತಿದ್ದ ಹಳೆಯ ಸ್ನೇಹಿತರು!: ಕಾರಣವೇನು ಗೊತ್ತಾ?

Update: 2019-05-18 12:16 GMT

ಹೊಸದಿಲ್ಲಿ, ಮೇ 18:  ಟೀಂ ಇಂಡಿಯಾದ ಮಾಜಿ ಕಪ್ತಾನ ಎಂ. ಎಸ್. ಧೋನಿ ತಮ್ಮ ಹಲವಾರು ಹಳೆಯ ಸ್ನೇಹಿತರೊಂದಿಗೂ  ಬಾಂಧವ್ಯವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಹತ್ತೊಂಬತ್ತು ವರ್ಷಗಳ ಹಿಂದೆ ಅವರು ಬಿಹಾರ ರಾಜ್ಯವನ್ನು ಪ್ರತಿನಿಧಿಸಿ ಕ್ರಿಕೆಟ್ ಆಟವಾಡುತ್ತಿದ್ದಾಗಿನ ಅವರ ಅನೇಕ ಸ್ನೇಹಿತರು ಈಗಲೂ ಅವರನ್ನು ಕೊಂಡಾಡುತ್ತಾರೆ.

ಇತ್ತೀಚೆಗೆ ಬಿಹಾರದ ಅವರ ಮಾಜಿ ಟೀಂ ಮೇಟ್ ಹಾಗೂ ಆತ್ಮೀಯ ಸ್ನೇಹಿತ  ಸತ್ಯ ಪ್ರಕಾಶ್, ಸ್ಪೋರ್ಟ್ಸ್ ಸ್ಟಾರ್ ಜತೆ ಮಾತನಾಡುತ್ತಾ `ಕ್ಯಾಪ್ಟನ್ ಕೂಲ್' ಬಗ್ಗೆ ಕೆಲ ಸ್ವಾರಸ್ಯಕರ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

“ನಾವೆಲ್ಲರೂ ಅವರನ್ನು ಆತಂಕವಾದಿ ಎಂದು ಕರೆಯುತ್ತಿದ್ದೆವು. ಅವರು 30 ಬಾಲ್ ಗಳಲ್ಲಿ 40-50 ರನ್ ಬಾರಿಸುತ್ತಿದ್ದರು.  ಆದರೆ  ಮುಂದೆ ದೇಶಕ್ಕಾಗಿ ಆಡಲು ಆರಂಭಿಸಿದಾಗ ಅವರೊಬ್ಬ ಸೈಂಟ್ (ಸಂತ) ಆಗಿ ಬಿಟ್ಟರು. ಹೀ ಈಸ್ ಎ ಗುಡ್ ಲರ್ನರ್'' ಎಂದಿದ್ದಾರೆ.

ಧೋನಿ ಅವರ ಜೀವನ ವೃತ್ತಾಂತ `ಎಂ ಎಸ್ ಧೋನಿ : ದಿ ಅನ್ ಟೋಲ್ಡ್ ಸ್ಟೋರಿ' ಚಲನಚಿತ್ರವನ್ನು  ನೋಡಿದವರಿಗೆ ಧೋನಿಗೆ ಖರಗಪುರ್ ರೈಲ್ವೆ ನಿಲ್ದಾಣದಲ್ಲಿ ನೌಕರಿ ದೊರಕಿಸಿ ಕೊಡುವಲ್ಲಿ ಸತ್ಯಪ್ರಕಾಶ್ ಅವರು ಪಟ್ಟ ಶ್ರಮದ ಬಗ್ಗೆ ತಿಳಿದಿರಬಹುದು.

ಧೋನಿ ಅವರು ಕಪ್ತಾನರಾಗಿದ್ದಾಗಿನ ಅವರ ಸಾಧನೆ ಹಾಗೂ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಅವರನ್ನು ಸತ್ಯ ಪ್ರಕಾಶ್ ಹೊಗಳಿದ್ದಾರೆ. “ಹಿಂದೆ ಧೋನಿ ಕಪ್ತಾನನಾಗಿ ಹೆಚ್ಚು ಪಂದ್ಯಗಳನ್ನು ಆಡಿರಲಿಲ್ಲ. ಆದರೆ ಭಾರತ ತಂಡದ ಕಪ್ತಾನನಾಗಿ ಅವರು  ಹಲವು ಮಹಾನ್ ಆಟಗಾರರ ನಾಯಕರಾಗಿದ್ದರು. ಹಿಂದೆ ಅವರು ಹಿಂದಿ ಭಾಷೆಯಲ್ಲಿಯೇ ಮಾತನಾಡುತ್ತಿದ್ದರು ಆದರೆ ಈಗ ಇಂಗ್ಲಿಷಿನಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ನಾವು ಸ್ನೇಹಿತರು ಅವರಲ್ಲಿದ್ದ ಸಾಮರ್ಥ್ಯವನ್ನು ಅರಿತಿರಲೇ ಇಲ್ಲ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News