ಚೀನಾಕ್ಕಿಂತಲೂ ಕಡೆಯಾಗಿ ಅಮೆರಿಕವನ್ನು ನಡೆಸಿಕೊಳ್ಳುತ್ತಿರುವ ಐರೋಪ್ಯ ಒಕ್ಕೂಟ: ಟ್ರಂಪ್ ಆರೋಪ

Update: 2019-05-18 16:33 GMT

ವಾಶಿಂಗ್ಟನ್, ಮೇ 18: ವ್ಯಾಪಾರದ ವಿಷಯದಲ್ಲಿ ಐರೋಪ್ಯ ಒಕ್ಕೂಟವು ಚೀನಾಕ್ಕಿಂತಲೂ ಕಡೆಯಾಗಿ ಅಮೆರಿಕವನ್ನು ನಡೆಸಿಕೊಳ್ಳುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕ ಮತ್ತು ಚೀನಾಗಳು ಹಲವು ತಿಂಗಳುಗಳಿಂದ ಪರಸ್ಪರ ವ್ಯಾಪಾರ ಸಮರದಲ್ಲಿ ತೊಡಗಿರುವುದನ್ನು ಸ್ಮರಿಸಬಹುದಾಗಿದೆ.

ವಾಶಿಂಗ್ಟನ್‌ನಲ್ಲಿ ಶುಕ್ರವಾರ ನಡೆದ ರಿಯಲ್ ಎಸ್ಟೇಟ್ ಏಜಂಟರ ಸಮಾವೇಶವೊಂದನ್ನು ಉದ್ದೇಶಿಸಿ ಟ್ರಂಪ್ ಮಾತನಾಡುತ್ತಿದ್ದರು.

ಐರೋಪ್ಯ ಒಕ್ಕೂಟ ಮತ್ತು ಜಪಾನ್ ಜೊತೆಗಿನ ವ್ಯಾಪಾರ ಮಾತುಕತೆಗಳಿಗೆ ಹೆಚ್ಚು ಸಮಯವನ್ನು ನೀಡುವುದಕ್ಕಾಗಿ, ಆ ದೇಶಗಳಿಂದ ಮಾಡಿಕೊಳ್ಳುವ ಕಾರುಗಳು ಮತ್ತು ಬಿಡಿಭಾಗಗಳ ಆಮದಿನ ಮೇಲೆ ಸುಂಕ ವಿಧಿಸುವ ನಿರ್ಧಾರವನ್ನು ಟ್ರಂಪ್ ಆರು ತಿಂಗಳು ಮುಂದೂಡಿದ್ದಾರೆ ಎಂದು ಶ್ವೇತಭವನ ಶುಕ್ರವಾರ ತಿಳಿಸಿದೆ.

ಕೆಲವು ಆಮದು ವಾಹನಗಳು ಮತ್ತು ಬಿಡಿಭಾಗಗಳು ರಾಷ್ಟ್ರೀಯ ಭದ್ರತಾ ಬೆದರಿಕೆಯನ್ನು ಒಡ್ಡುತ್ತವೆ ಎಂಬುದಾಗಿ ಟ್ರಂಪ್ ಶುಕ್ರವಾರ ಘೋಷಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News