ಗರ್ಭಪಾತವನ್ನು ನಿಷೇಧಿಸಿದ ಅಮೆರಿಕದ ಮಿಝೂರಿ ರಾಜ್ಯ

Update: 2019-05-18 16:35 GMT

 ವಾಶಿಂಗ್ಟನ್, ಮೇ 18: ಭ್ರೂಣದ ಹೃದಯ ಬಡಿತ ಆರಂಭವಾದ ಬಳಿಕ, ಗರ್ಭಪಾತವನ್ನು ನಿಷೇಧಿಸುವ ಮಸೂದೆಯೊಂದನ್ನು ಅಮೆರಿಕದ ಮಿಝೂರಿ ರಾಜ್ಯದ ಶಾಸನ ಸಭೆ ಶುಕ್ರವಾರ ಅಂಗೀಕರಿಸಿದೆ.

ಸುಮಾರು 8 ವಾರಗಳಿಗಿಂತ ಹೆಚ್ಚಿನ ಗರ್ಭವನ್ನು ಕೊನೆಗೊಳಿಸುವುದನ್ನು ನಿಷೇಧಿಸುವ ಮಸೂದೆಯನ್ನು ರಿಪಬ್ಲಿಕನ್ ಪಕ್ಷದ ಶಾಸಕರ ಪ್ರಾಬಲ್ಯದ ಸದನವು ಹೆಚ್ಚಿನ ಬಹುಮತದಿಂದ ಅಂಗೀಕರಿಸಿತು.

ನಿಷೇಧವನ್ನು ಉಲ್ಲಂಘಿಸಿ ಗರ್ಭಪಾತವನ್ನು ನಡೆಸುವ ವೈದ್ಯರ 5ರಿಂದ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ರಿಪಬ್ಲಿಕನ್ ಪಕ್ಷದ ಪ್ರಾಬಲ್ಯದ ಶಾಸನ ಸಭೆಗಳು ಈಗಾಗಲೇ ಹಲವು ರಾಜ್ಯಗಳಲ್ಲಿ ಗರ್ಭಪಾತ ನಿಷೇಧ ಮಸೂದೆಯನ್ನು ಅಂಗೀಕರಿಸಿರುವುದನ್ನು ಸ್ಮರಿಸಬಹುದಾಗಿದೆ.

ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಅಮೆರಿಕ ಸುಪ್ರೀಂ ಕೋರ್ಟ್‌ನ 1973ರ ಆದೇಶವನ್ನು ಪ್ರಶ್ನಿಸುವುದಕ್ಕಾಗಿ ರಿಪಬ್ಲಿಕನ್ ಪಕ್ಷದ ರಾಜ್ಯ ಸರಕಾರಗಳು ಈ ಕ್ರಮಗಳನ್ನು ತೆಗೆದುಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News