ಬ್ರಿಟನ್: ಕೃಪಾಣಗಳನ್ನು ಒಯ್ಯಲು ಸಿಖ್ಖರಿಗೆ ಅನುಮತಿ

Update: 2019-05-18 17:08 GMT

ಲಂಡನ್, ಮೇ 18: ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಚೂರಿ ದಾಳಿಯನ್ನು ನಿಯಂತ್ರಿಸುವ ಉದ್ದೇಶದ ನೂತನ ಶಸ್ತ್ರಾಸ್ತ್ರ ಮಸೂದೆಯು ಕಾನೂನಾಗಿದೆ. ಸಂಸತ್ತು ಈಗಾಗಲೇ ಅಂಗೀಕರಿಸಿದ್ದ ಮಸೂದೆಗೆ ರಾಝಿ ಎಲಿಝಬೆತ್ ಈ ವಾರ ಸಹಿ ಹಾಕಿದ್ದಾರೆ.

ಆದಾಗ್ಯೂ, ಸಿಖ್ಖರು ಕೃಪಾಣ (ಧಾರ್ಮಿಕ ಖಡ್ಗ)ಗಳನ್ನು ಒಯ್ಯಲು ಈ ಕಾನೂನು ಅವಕಾಶ ನೀಡುತ್ತದೆ. ಕಳೆದ ವರ್ಷದ ಕೊನೆಯಲ್ಲಿ ಇದಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ಮಾಡಲಾಗಿತ್ತು.

‘‘ನಾವು ಸಿಖ್ ಸಮುದಾಯದೊಂದಿಗೆ ಕೃಪಾಣಗಳ ವಿಷಯದಲ್ಲಿ ನಿಕಟ ಮಾತುಕತೆಗಳನ್ನು ನಡೆಸಿದ್ದೇವೆ. ಅದರ ಪರಿಣಾಮವಾಗಿ, ಸಿಖ್ಖರು ಕೃಪಾಣಗಳನ್ನು ಒಯ್ಯಲು ಸಾಧ್ಯವಾಗುವಂತೆ ಮಸೂದೆಗೆ ತಿದ್ದುಪಡಿ ತಂದಿದ್ದೇವೆ’’ ಎಂದು ಬ್ರಿಟನ್ ಗೃಹ ಕಚೇರಿಯ ವಕ್ತಾರರೊಬ್ಬರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News