ಲಿಯೊನೆಲ್ ಮೆಸ್ಸಿಗೆ ಯುರೋಪ್‌ನ ‘ಗೋಲ್ಡನ್ ಶೂ’ ಪ್ರಶಸ್ತಿ

Update: 2019-05-25 09:58 GMT

 ಬಾರ್ಸಿಲೋನ, ಮೇ 25: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸತತ ಮೂರನೇ ವರ್ಷ ಯುರೋಪ್‌ನ ಅಗ್ರ ಗೋಲ್‌ಸ್ಕೋರರ್‌ಗೆ ನೀಡಲಾಗುವ ‘ಗೋಲ್ಡನ್ ಶೂ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಮೆಸ್ಸಿ ಪ್ರತಿಸ್ಪರ್ಧಿ ಕೈಲಿಯಾನ್ ಬಾಪೆಗೆ ‘ಗೋಲ್ಡನ್ ಶೂ’ ಪ್ರಶಸ್ತಿಗೆ ಅರ್ಹತೆ ಪಡೆಯಲು ಶುಕ್ರವಾರ ನಡೆದ ಪ್ಯಾರಿಸ್ ಸೈಂಟ್ ಜರ್ಮೈನ್ ಫೈನಲ್ ಲೀಗ್ ಪಂದ್ಯದಲ್ಲಿ ನಾಲ್ಕು ಗೋಲುಗಳನ್ನು ಗಳಿಸುವ ಅಗತ್ಯವಿತ್ತು. ಆದರೆ ಅವರು 4 ಗೋಲುಗಳನ್ನು ಗಳಿಸಲು ವಿಫಲರಾಗಿದ್ದರು.

ಯುರೋಪ್‌ನ ಅಗ್ರ ವಿಭಾಗಗಳ ಲೀಗ್ ಪಂದ್ಯಗಳಲ್ಲಿ ಮೆಸ್ಸಿ ಅಗ್ರ ಸ್ಕೋರರ್ ಆಗಿದ್ದ ಕಾರಣ ಗೋಲ್ಡನ್ ಶೂ ಪ್ರಶಸ್ತಿ ಒಲಿದಿದೆ. ಮೆಸ್ಸಿ ಈ ಬಾರಿ ಬಾರ್ಸಿಲೋನ ಪರ 36 ಗೋಲುಗಳನ್ನು ಗಳಿಸಿದ್ದರು. ಬಾಪೆ ಅವರು ಪ್ಯಾರಿಸ್ ಸೈಂಟ್ ಜರ್ಮೈನ್(ಪಿಎಸ್‌ಜಿ)ಪರ 33 ಗೋಲುಗಳನ್ನು ಗಳಿಸಿದ್ದರು. ಮೆಸ್ಸಿ ಸಾಹಸದ ನೆರವಿನಿಂದ ಬಾರ್ಸಿಲೋನ ತಂಡ ಕಳೆದ ತಿಂಗಳು ಲಾ ಲಿಗ ಪ್ರಶಸ್ತಿ ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News