ವಿಶ್ವಸಂಸ್ಥೆಗೆ ಭಾರತ ಮೂಲದ ಮಹಿಳೆ ನೇಮಕ
Update: 2019-05-31 22:55 IST
ವಿಶ್ವಸಂಸ್ಥೆ, ಮೇ 31: ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಗುರುವಾರ ಭಾರತ ಮೂಲದ ಅನಿತಾ ಭಾಟಿಯಾರನ್ನು ವಿಶ್ವಸಂಸ್ಥೆಯ ಲಿಂಗ ಸಮಾನತೆ ಹಾಗೂ ಸಂಪನ್ಮೂಲ ನಿರ್ವಹಣೆ, ಸ್ಥಿರತೆ ಮತ್ತು ಭಾಗೀದಾರಿಕೆಗಳಿಗಾಗಿನ ಮಹಿಳಾ ಸಬಲೀಕರಣ ಘಟಕದ ಉಪ ಕಾರ್ಯಕಾರಿ ನಿರ್ದೇಶಕ ಹುದ್ದೆಗೆ ನೇಮಿಸಿದ್ದಾರೆ.
ಆಯಕಟ್ಟಿನ ಭಾಗೀದಾರಿಕೆಗಳು, ಸಂಪನ್ಮೂಲ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ಅನಿತಾ ಭಾಟಿಯಾ ಪರಿಣತಿ ಹೊಂದಿದ್ದಾರೆ ಎಂದು ವಿಶ್ವಸಂಸ್ಥೆಯ ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಭಾಟಿಯಾ ಕಲ್ಕತ್ತಾ ವಿಶ್ವವಿದ್ಯಾನಿಲಯದಿಂದ ಇತಿಹಾಸದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಅವರು ಅಮೆರಿಕದ ಯೇಲ್ ವಿಶ್ವವಿದ್ಯಾನಿಲಯದಿಂದ ಪೊಲಿಟಿಕಲ್ ಸಯನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಅವರು ಹಲವು ವರ್ಷಗಳ ಕಾಲ ವಿಶ್ವಬ್ಯಾಂಕ್‌ನ ಖಾಸಗಿ ಕ್ಷೇತ್ರದ ಭಾಗವಾಗಿರುವ ಇಂಟರ್‌ನ್ಯಾಶನಲ್ ಫೈನಾನ್ಸ್ ಕಾರ್ಪೊರೇಶನ್‌ನಲ್ಲಿ ಜಾಗತಿಕ ಭಾಗೀದಾರಿಕೆಗಳ ನಿರ್ದೇಶಕಿಯಾಗಿದ್ದರು.