ನ್ಯೂಝಿಲ್ಯಾಂಡ್‌ಗೆ ಭರ್ಜರಿ ಜಯ
Update: 2019-06-01 20:26 IST
ಕಾರ್ಡಿಫ್, ಜೂ.1: ವಿಶ್ವಕಪ್‌ನ ಮೂರನೇ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯದಲ್ಲಿ ಶನಿವಾರ ಶ್ರೀಲಂಕಾ ವಿರುದ್ಧ ನ್ಯೂಝಿಲ್ಯಾಂಡ್ 10 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ.
ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ 137 ರನ್‌ಗಳ ಸವಾಲನ್ನು ಪಡೆದ ನ್ಯೂಝಿಲ್ಯಾಂಡ್ 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 137 ರನ್ ಗಳಿಸುವ ಮೂಲಕ ಗೆಲುವು ದಾಖಲಿಸಿದೆ.
ಆರಂಭಿಕ ದಾಂಡಿಗ ಮಾರ್ಟಿನ್ ಗಪ್ಟಿಲ್ ಔಟಾಗದೆ 73ರನ್(51ಎ, 8ಬೌ, 2ಸಿ) ಮತ್ತು ಕಾಲಿನ್ ಮುನ್ರೊ ಔಟಾಗದೆ 58ರನ್(47, 6ಬೌ,1ಸಿ) ಗಳಿಸಿದರು.
ಇದಕ್ಕೂ ಮೊದಲು ಹೆನ್ರಿ ದಾಳಿಗೆ ಸಿಲುಕಿದ ಶ್ರೀಲಂಕಾ 29.2 ಓವರ್‌ಗಳಲ್ಲಿ 136 ರನ್‌ಗಳಿಗೆ ಆಲೌಟಾಗಿತ್ತು.