×
Ad

ಮರು ಹೋರಾಟಕ್ಕೆ ದ. ಆಫ್ರಿಕ ಸಜ್ಜು, ಇಂದು ಬಾಂಗ್ಲಾ ಸವಾಲು

Update: 2019-06-01 23:38 IST

ಲಂಡನ್, ಜೂ.1: ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೂರ್ನಮೆಂಟ್‌ನ ಆರಂಭಿಕ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ವಿಫಲವಾಗಿದ್ದ ದಕ್ಷಿಣ ಆಫ್ರಿಕ ರವಿವಾರ ಓವಲ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ ಕ್ರಿಕೆಟ್‌ನ 5ನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಸ್ಪಿನ್ನರ್ ಇಮ್ರಾನ್ ತಾಹಿರ್‌ಗೆಬೌಲಿಂಗ್ ದಾಳಿ ಆರಂಭಿಸಲು ಅವಕಾಶ ನೀಡಿ ರಣತಂತ್ರ ರೂಪಿಸಿದ್ದ ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಆರಂಭದಲ್ಲಿ ಯಶಸ್ಸು ಕಂಡಿದ್ದರು. ತಾಹಿರ್ ತನ್ನ ಸ್ಪಿನ್ ಮೋಡಿಯಿಂದ ಇಂಗ್ಲೆಂಡ್‌ನ ಅಪಾಯಕಾರಿ ಆಟಗಾರ ಜಾನಿ ಬೈರ್‌ಸ್ಟೋವ್‌ಗೆಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಆದರೆ, ಆರಂಭಿಕ ಮೇಲುಗೈನ ಲಾಭ ಎತ್ತಲು ವಿಫಲವಾದ ದಕ್ಷಿಣ ಆಫ್ರಿಕ 104 ರನ್‌ಗಳಿಂದ ಸೋಲುಂಡಿತು.

ಇನಿಂಗ್ಸ್‌ನುದ್ದಕ್ಕೂ ಆಫ್ರಿಕದ ಬೌಲರ್‌ಗಳು ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದರೂ, ಡೇಲ್ ಸ್ಟೇಯ್ನೆ ಅನುಪಸ್ಥಿತಿ ಭಾರೀ ಹಿನ್ನಡೆ ತಂದಿತು ಎಂದು ಪ್ಲೆಸಿಸ್ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧ ಜಯ ದಾಖಲಿಸಲು ಆಫ್ರಿಕ ತಂಡಕ್ಕೆ ಹಿರಿಯ ದಾಂಡಿಗರ ಕೊಡುಗೆ ಅಗತ್ಯವಿದೆ. ಬಾಂಗ್ಲಾದೇಶ ತಂಡ ಭಾರತ ವಿರುದ್ಧ ಆಡಿದ್ದ ತನ್ನ ಎರಡನೇ ಅಭ್ಯಾಸ ಪಂದ್ಯದಲ್ಲಿ 95 ರನ್‌ಗಳಿಂದ ಸೋತಿತ್ತು. ಆದಾಗ್ಯೂ ತಂಡದ ಹೊಸ ಚೆಂಡಿನ ಬೌಲರ್‌ಗಳು ವಾತಾವರಣದ ಲಾಭ ಪಡೆದು ಭಾರತದ ಅಗ್ರ ಸರದಿಗೆ ಸವಾಲಾಗಿದ್ದರು. ರನ್ ಚೇಸಿಂಗ್ ವೇಳೆ ನಿರಂತರ ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶದ ಪರ ವಿಕೆಟ್‌ಕೀಪರ್ ದಾಂಡಿಗ ಮುಶ್ಫಿಕುರ್ರಹೀಂ ಮಾತ್ರ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News