×
Ad

ನಾಲ್ಕನೇ ಸುತ್ತಿಗೆ ಜೊಕೊವಿಕ್

Update: 2019-06-01 23:40 IST

ಪ್ಯಾರಿಸ್, ಜೂ.1: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಮೆಂಟ್‌ನಲ್ಲಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದು, ಸತತ ಎರಡನೇ ಬಾರಿ ಎಲ್ಲ ನಾಲ್ಕೂ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಸರ್ಬಿಯ ಆಟಗಾರ ಜೊಕೊವಿಕ್ ಶನಿವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಶ್ರೇಯಾಂಕರಹಿತ ಸಲ್ವಾಟೊರ್ ಕಾರುಸೊರನ್ನು 6-3, 6-3, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ.

ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಜಾನ್-ಲೆನಾರ್ಡ್ ಸ್ಟ್ರಫ್ ಅಥವಾ ಕ್ರೊಯೇಶಿಯದ 13ನೇ ಶ್ರೇಯಾಂಕದ ಬೊರ್ನಾ ಕೊರಿಕ್‌ರನ್ನು ಎದುರಿಸಲಿದ್ದಾರೆ.

 ಕೊನೆಗೂ ನಾನು 2ನೇ ಸೆಟ್‌ನಲ್ಲಿ ಉತ್ತಮ ಫಾರ್ಮ್ ಕಂಡುಕೊಂಡೆ. ವಿಶ್ವದ ಅತ್ಯಂತ ಸೊಗಸಾದ ಟೂರ್ನಮೆಂಟ್ ಫ್ರೆಂಚ್ ಓಪನ್‌ನಲ್ಲಿ ಆಡುವುದಕ್ಕೆ ತುಂಬಾ ಸಂತೋಷವಾಗುತ್ತಿದೆೞೞಎಂದು ಟೂರ್ನಮೆಂಟ್‌ನಲ್ಲಿ ಈ ತನಕ ಒಂದೂ ಸೆಟನ್ನು ಕಳೆದುಕೊಳ್ಳದ ಜೊಕೊವಿಕ್ ಹೇಳಿದ್ದಾರೆ.

ಅಗ್ರ ಶ್ರೇಯಾಂಕದ ಜೊಕೊವಿಕ್ ಸತತ 10ನೇ ವರ್ಷ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. 2016ರಲ್ಲಿ ಪ್ಯಾರಿಸ್ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದ ಜೊಕೊವಿಕ್ ಇದೀಗ ಎರಡನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News