ವಿಶ್ವಕಪ್ ನ ಮೊದಲ ಶತಕ ಬಾರಿಸಿದ ರೂಟ್

Update: 2019-06-03 17:13 GMT

ನಾಟಿಂಗ್‌ಹ್ಯಾಮ್, ಜೂ.4: ಇಂಗ್ಲೆಂಡ್‌ನ ಅಗ್ರಸರದಿಯ ದಾಂಡಿಗ ಜೋ ರೂಟ್ ಸೋಮವಾರ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಶತಕ ದಾಖಲಿಸಿದ್ದಾರೆ.

ರೂಟ್ ಅವರು 134ನೇ ಏಕದಿನ ಪಂದ್ಯದಲ್ಲಿ 15ನೇ ಶತಕ ದಾಖಲಿಸಿದರು. 97 ಎಸೆತಗಳಲ್ಲಿ 9ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಅವರು ಶತಕ ಪೂರ್ಣಗೊಳಿಸಿದರು.

ರೂಟ್ ಮತ್ತು ಜೋಶ್ ಬಟ್ಲರ್ ಜೊತೆಯಾಗಿ ಐದನೇ ವಿಕೆಟ್‌ಗೆ 130 ರನ್‌ಗಳ ಜೊತೆಯಾಟ ನೀಡಿದರು. ತಂಡದ ಸ್ಕೋರ್‌ನ್ನು 38.5 ಓವರ್‌ಗಳಲ್ಲಿ 248ಕ್ಕೆ ತಲುಪುವ ತನಕ ಬಟ್ಲರ್ ಜೊತೆ ಹೋರಾಟ ನಡೆಸಿದರು. 107 ರನ್ (104ಎ, 10ಬೌ, 1ಸಿ) ಗಳಿಸಿದ ರೂಟ್ ಶಾದಾಬ್ ಖಾನ್ ಎಸೆತದಲ್ಲಿ ಹಫೀಝ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News