ಧೋನಿಯ ಸೇನಾ ಲಾಂಛನದ ಗ್ಲೌಸ್ ಬಳಕೆಗೆ ಅನುಮತಿ ನಿರಾಕರಿಸಿದ ಐಸಿಸಿ

Update: 2019-06-07 18:07 GMT

 ಲಂಡನ್/ಮುಂಬೈ, ಜೂ.7: ಮಹೇಂದ್ರ ಸಿಂಗ್ ಧೋನಿಗೆ ವಿಶ್ವಕಪ್ ಪಂದ್ಯಗಳ ವೇಳೆ ವಿಕೆಟ್‌ಕೀಪಿಂಗ್ ಗ್ಲೌಸ್ ಮೇಲೆ ಸೇನೆಯ ಲಾಂಛನದ ಬಳಕೆಗೆ ಅನುಮತಿ ನಿರಾಕರಿಸುವ ಮೂಲಕ ಐಸಿಸಿ ಕಠಿಣ ನಿಲುವು ತಳೆದಿದೆ. ಧೋನಿ ಬಳಸಿರುವ ಸೇನೆಯ ಚಿಹ್ನೆ ಮಿಲಿಟರಿ ಲಾಂಛನವಲ್ಲ ಎಂಬ ಬಿಸಿಸಿಐ ವಾದವನ್ನು ಐಸಿಸಿ ತಳ್ಳಿ ಹಾಕಿದೆ.

ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಧೋನಿ ಧರಿಸಿರುವಂತಹ ಲಾಂಛನವಿರುವ ವಿಕೆಟ್‌ಕೀಪಿಂಗ್ ಗ್ಲೌಸ್‌ಗೆ ಅನುಮತಿಯಿಲ್ಲದಿದ್ದರೂ, ಕಳೆದ ಪಂದ್ಯದಲ್ಲಿ ಈ ಲಾಂಛನವನ್ನು ಧೋನಿ ಧರಿಸಿರುವುದನ್ನು ಬಿಸಿಸಿಐ ಪತ್ರಕ್ಕೆ ನೀಡಿರುವ ಉತ್ತರದಲ್ಲಿ ಐಸಿಸಿ ದೃಢಪಡಿಸಿದೆ ಎಂದು ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ಐಸಿಸಿ ಟೂರ್ನಿಗಳಲ್ಲಿ ಆಟಗಾರ ಯಾವುದೇ ವೈಯಕ್ತಿಕ ಸಂದೇಶ ಸಾರುವ ಅಥವಾ ಲಾಂಛನವನ್ನು ಬಟ್ಟೆ ಅಥವಾ ಸಾಧನಗಳಲ್ಲಿ ಬಳಸಲು ಅನುಮತಿಯಿಲ್ಲ. ಅಷ್ಟು ಮಾತ್ರವಲ್ಲದೆ, ಈ ಲಾಂಛನಗಳು ವಿಕೆಟ್‌ಕೀಪರ್ ಗ್ಲೌಸ್‌ಗಳಿಗೆ ನೀಡಿರುವ ಅನುಮತಿಯ ನಿಯಮಾವಳಿ ಉಲ್ಲಂಘನೆಯಾಗುತ್ತದೆ ಎಂದು ಐಸಿಸಿ ಅಭಿಪ್ರಾಯಪಟ್ಟಿದೆ.

ಮುಂಬರುವ ಪಂದ್ಯಗಳಲ್ಲೂ ಧೋನಿಗೆ ಗ್ಲೌಸ್‌ನಲ್ಲಿ ಸೇನೆಯ ಚಿಹ್ನೆಯೊಂದಿಗೆ ಆಡಲು ಅನುಮತಿ ನೀಡುವಂತೆ ಬಿಸಿಸಿಐ ಇಂದು ಐಸಿಸಿಗೆ ಅಧಿಕೃತ ಪತ್ರ ಬರೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News