ವಿಶ್ವಕಪ್: ಬಾಂಗ್ಲಾ ಗೆಲುವಿಗೆ 387 ರನ್ ಗುರಿ ನೀಡಿದ ಇಂಗ್ಲೆಂಡ್

Update: 2019-06-08 13:35 GMT

ಕಾರ್ಡಿಫ್, ಜೂ.8: ಆರಂಭಿಕ ಆಟಗಾರ ಜೇಸನ್ ರಾಯ್ ಸಿಡಿಸಿದ ಭರ್ಜರಿ ಶತಕ(153, 121 ಎಸೆತ, 14 ಬೌಂಡರಿ, 5 ಸಿಕ್ಸರ್)ಸಹಾಯದಿಂದ ಆತಿಥೇಯ ಇಂಗ್ಲೆಂಡ್ ತಂಡ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ನ 12ನೇ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 386 ರನ್ ಗಳಿಸಿದೆ. ಬಾಂಗ್ಲಾದ ಗೆಲುವಿಗೆ ಕಠಿಣ ಗುರಿ ನೀಡಿದೆ. ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಬಾಂಗ್ಲಾದೇಶ ತಂಡ ಇಂಗ್ಲೆಂಡನ್ನು ಬ್ಯಾಟಿಂಗ್‌ಗೆ ಇಳಿಸಿತು. ಜಾನಿ ಬೈರ್‌ಸ್ಟೊವ್(51, 50 ಎಸೆತ, 6 ಬೌಂಡರಿ) ಅವರೊಂದಿಗೆ ಮೊದಲ ವಿಕೆಟ್‌ಗೆ 128 ರನ್ ಜೊತೆಯಾಟ ನಡೆಸಿದ ಜೇಸನ್ ರಾಯ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು ತಪ್ಪು ಎಂಬ ಸಂದೇಶವನ್ನು ಬಾಂಗ್ಲಾಕ್ಕೆ ರವಾನಿಸಿದರು.

ರಾಯ್ ಹಾಗೂ ಬೈರ್‌ಸ್ಟೋವ್ ಹಾಕಿಕೊಂಡ ಬುನಾದಿಯ ಮೇಲೆ ಜೋಸ್ ಬಟ್ಲರ್(64, 44 ಎಸೆತ, 2 ಬೌಂಡರಿ, 4 ಸಿಕ್ಸರ್)ನಾಯಕ ಮೊರ್ಗನ್(35) ರನ್ ಶಿಖರ ಕಟ್ಟಿದರು. ಆಲ್‌ರೌಂಡರ್ ವೋಕ್ಸ್(ಔಟಾಗದೆ 17) ಹಾಗೂ ಪ್ಲಂಕೆಟ್(ಔಟಾಗದೆ 27) ತಂಡದ ಮೊತ್ತವನ್ನು 387ಕ್ಕೆ ತಲುಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News