ಆಗ ಕ್ರಿಕೆಟ್ ಆಟಗಾರ್ತಿ, ಈಗ ಫ್ರೆಂಚ್ ಓಪನ್ ಚಾಂಪಿಯನ್ !

Update: 2019-06-08 16:47 GMT

 ಪ್ಯಾರಿಸ್, ಜೂ.8: ಆಸ್ಟ್ರೇಲಿಯದ ಆ್ಯಶ್ಲೆ ಬಾರ್ಟಿ ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಇಂದು ಜಯ ಗಳಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಬಾರ್ಟಿ ಅವರು ಪ್ರಶಸ್ತಿಯ ಸುತ್ತಿನಲ್ಲಿ ಝೆಕ್ ಗಣರಾಜ್ಯದ ಆಟಗಾರ್ತಿ ಮರ್ಕೆಟಾ ವೊಂಡ್ರೊಸೊವಾರನ್ನು 6-1, 6-3 ಅಂತರದಲ್ಲಿ ಮಣಿಸುವ ಮೂಲಕ ಚೊಚ್ಚಲ ಗ್ರ‍್ಯಾನ್‌  ಸ್ಲಾಮ್ ಕಿರೀಟ ಧರಿಸಿದ್ದಾರೆ.

ಇದರೊಂದಿಗೆ 46 ವರ್ಷಗಳ ಬಳಿಕ ಈ ಸಾಧನೆ ಮಾಡಿದ ಆಸ್ಟ್ರೇಲಿಯದ ಮೊದಲ ಆಟಗಾರ್ತಿ ಎನಿಸಿಕೊಂಡರು. 1973ರಲ್ಲಿ ಆಸ್ಟ್ರೇಲಿಯದ ಮಾರ್ಗೆಟ್ ಕೋರ್ಟ್ ಫ್ರೆಂಚ್ ಓಪನ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದರು.

ಫ್ರೆಂಚ್ ಓಪನ್ ಚಾಂಪಿಯನ್ ಆ್ಯಶ್ಲೆ ಬಾರ್ಟಿ 2014ರಲ್ಲಿ ಯುಎಸ್ ಓಪನ್ ಮೂಲಕ ಸ್ವಲ್ಪ ಸಮಯ ಟೆನಿಸ್ ನಿಂದ ದೂರ ಸರಿದು, ಆಸ್ಟ್ರೇಲಿಯದ ಮಹಿಳಾ ಕ್ರಿಕೆಟ್ ಲೀಗ್ ಬಿಗ್ ಬ್ಯಾಶ್ ಟೂರ್ನಿಯಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಪರ ಆಡಿದ್ದರು ಎನ್ನುವುದು ಇಲ್ಲಿ ಗಮನಾರ್ಹ . ವಿಮೆನ್ಸ್ ಬಿಗ್ ಬ್ಯಾಶ್ ಲೀಗ್ ನಲ್ಲಿ ಬಾರ್ಟಿ ಅವರು ಮೆಲ್ಬೋರ್ನ್ ಸ್ಟಾರ್ಸ್ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ 27 ಎಸೆತಗಳಲ್ಲಿ 39 ರನ್ ಸಿಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News