ದಕ್ಷಿಣ ಆಫ್ರಿಕ-ವೆಸ್ಟ್‌ಇಂಡೀಸ್ ವಿಶ್ವಕಪ್ ಪಂದ್ಯದಲ್ಲಿ ಮಳೆಯದ್ದೇ ಆಟ

Update: 2019-06-10 17:07 GMT

 ಸೌತಾಂಪ್ಟನ್, ಜೂ.10: ದಕ್ಷಿಣ ಆಫ್ರಿಕ ಹಾಗೂ ವೆಸ್ಟ್ ಇಂಡೀಸ್ ಮಧ್ಯೆ ಸೋಮವಾರ ವಿಶ್ವಕಪ್‌ನ 15ನೇ ಪಂದ್ಯದಲ್ಲಿ ಮಳೆ ಆರ್ಭಟ ಜೋರಾದ ಕಾರಣ ಪಂದ್ಯ ರದ್ದುಗೊಂಡಿದೆ.ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ.

ಸೋಮವಾರ ಟಾಸ್ ಜಯಿಸಿದ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ದಕ್ಷಿಣ ಆಫ್ರಿಕವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಮಳೆ ಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವ ಮೊದಲು ದಕ್ಷಿಣ ಆಫ್ರಿಕ 7.3ನೇ ಓವರ್‌ನಲ್ಲಿ 2 ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿತು.

ಆರಂಭದಲ್ಲೇ ಕಾಟ್ರೆಲ್(2-18)ಬೌಲಿಂಗ್ ದಾಳಿಗೆ ಸಿಲುಕಿದ ದಕ್ಷಿಣ ಆಫ್ರಿಕ 28 ರನ್ ಗಳಿಸುವಷ್ಟರಲ್ಲಿ ಹಾಶಿಮ್ ಅಮ್ಲ(6) ಹಾಗೂ ಮರ್ಕರಮ್(5) ವಿಕೆಟ್ ಕಳೆದುಕೊಂಡು ಕಳಪೆ ಆರಂಭ ಪಡೆಯಿತು.

ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ ಔಟಾಗದೆ 17 ರನ್(21 ಎಸೆತ, 1 ಬೌಂಡರಿ) ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News