ಭಾರತ-ನ್ಯೂಝಿಲ್ಯಾಂಡ್ ವಿಶ್ವಕಪ್ ಪಂದ್ಯ ಮಳೆಗಾಹುತಿ
Update: 2019-06-13 19:45 IST
ಟ್ರೆಂಟ್‌ಬ್ರಿಡ್ಜ್, ಜೂ.13: ಭಾರತ ಹಾಗೂ ನ್ಯೂಝಿಲ್ಯಾಂಡ್ ಮಧ್ಯೆ ಗುರುವಾರ ನಡೆಯಬೇಕಾಗಿದ್ದ ವಿಶ್ವಕಪ್‌ನ 17ನೇ ಪಂದ್ಯ ಮಳೆಗಾಹುತಿಯಾಗಿದೆ. ಈ ಹಿನ್ನೆಲೆಯಲ್ಲಿ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಂಡಿವೆ. ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 2:30ಕ್ಕೆ ಟಾಸ್ ಚಿಮ್ಮುವ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ, ಮಳೆ ನಿರಂತರ ಸುರಿಯುತ್ತಿರುವ ಕಾರಣ ಈ ಪ್ರಕ್ರಿಯೆ ಸಾಧ್ಯವಾಗಲಿಲ್ಲ್ಲ. ಅಂಪೈರ್‌ಗಳು ರಾತ್ರಿ 7:30ಕ್ಕೆ ಕೊನೆಯ ಬಾರಿ ಪಿಚ್ ಪರೀಕ್ಷಿಸಿ ಪಂದ್ಯ ರದ್ದುಪಡಿಸಲು ನಿರ್ಧರಿಸಿದರು.
ಈ ಬಾರಿಯ ವಿಶ್ವಕಪ್‌ನಲ್ಲಿ ಒಂದೂ ಎಸೆತ ಕಾಣದೇ ರದ್ದಾಗಿರುವ ಮೂರನೇ ಪಂದ್ಯ ಇದಾಗಿದೆ. ಈಗಾಗಲೇ ಎರಡು ಪಂದ್ಯಗಳು ರದ್ದಾಗಿದ್ದವು. ದಕ್ಷಿಣ ಆಫ್ರಿಕ-ವೆಸ್ಟ್‌ಇಂಡೀಸ್ ಪಂದ್ಯ 7.5 ಓವರ್‌ಗಳಲ್ಲಿ ನಡೆಯುತ್ತಿದ್ದಾಗ ಮಳೆ ಅಡ್ಡಿಯಾಗಿತ್ತು. ಅಂತಿಮವಾಗಿ ಈ ಪಂದ್ಯ ವನ್ನು ರದ್ದುಗೊಳಿಸಲಾಗಿತ್ತು.