ವಿಶ್ವಕಪ್: ರೋಹಿತ್ ಶತಕ

Update: 2019-06-16 11:38 GMT

 ಮ್ಯಾಂಚೆಸ್ಟರ್, ಜೂ.16: ವಿಶ್ವಕಪ್‌ನ 22ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಶತಕ ದಾಖಲಿಸಿದರು.

85 ಎಸೆತಗಳಲ್ಲಿ 9 ಬೌಂಡರಿಗಳ 3 ಸಿಕ್ಸರ್ ಸಹಾಯದಿಂದ ರೋಹಿತ್ ಶರ್ಮಾ ಶತಕ ದಾಖಲಿಸಿದರು. ಈ ಬಾರಿ ವಿಶ್ವಕಪ್‌ನಲ್ಲಿ ಅವರು ಎರಡನೇ ಶತಕ ದಾಖಲಿಸಿದರು. ದಕ್ಷಿಣ ಆಫ್ರಿಕ ವಿರುದ್ಧ ಅಜೇಯ 122 ಮತ್ತು ಆಸ್ಟ್ರೇಲಿಯ ವಿರುದ್ಧ 57 ರನ್ ಗಳಿಸಿದ್ದಾರೆ.

209ನೇ ಏಕದಿನ ಪಂದ್ಯವನ್ನಾಡುತ್ತಿರುವ ರೋಹಿತ್ ಶರ್ಮಾ 24ನೇ ಏಕದಿನ ಶತಕ ಪೂರೈಸಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಇನಿಂಗ್ಸ್ ಆರಂಭಿಸಿದ ರೋಹಿತ್ ಶಮಾರ್  ಮತ್ತು ಲೋಕೇಶ್ ರಾಹುಲ್ ಮೊದಲ ವಿಕೆಟ್‌ಗೆ 136 ರನ್ ಗಳಿಸಿದರು. ರಾಹುಲ್ 57 ರನ್ ಗಳಿಸಿ ಔಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News