ವಿಶ್ವಕಪ್: ರೋಹಿತ್ ಶರ್ಮಾ ಪಾಕ್ ವಿರುದ್ಧ ಶತಕ ಸಿಡಿಸಿದ ಭಾರತದ 2ನೇ ದಾಂಡಿಗ

Update: 2019-06-16 12:54 GMT

ಮ್ಯಾಂಚೆಸ್ಟರ್, ಜೂ.16: ಜೂ.16: ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಶತಕ ಸಿಡಿಸಿದ ಎರಡನೇ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು.

ರವಿವಾರ ನಡೆದ ವಿಶ್ವಕಪ್ ಗ್ರೂಪ್ ಪಂದ್ಯದಲ್ಲಿ ರೋಹಿತ್ 85 ಎಸೆತಗಳಲ್ಲಿ ತನ್ನ 24ನೇ ಶತಕ ಸಿಡಿಸಿದರು. ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯದಲ್ಲಿ 2015ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಶತಕ ಸಿಡಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಅಡಿಲೇಡ್ ಓವಲ್‌ನಲ್ಲಿ 107 ರನ್ ಗಳಿಸಿದ್ದ ಕೊಹ್ಲಿ 2003ರ ಆವೃತ್ತಿಯ ವಿಶ್ವಕಪ್‌ನಲ್ಲಿ 98 ರನ್ ಗಳಿಸಿದ್ದ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್‌ರ ದಾಖಲೆಯನ್ನು ಮುರಿದಿದ್ದರು.

ದಕ್ಷಿಣ ಆಫ್ರಿಕ ವಿರುದ್ಧ ಸೌತಾಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ 122 ರನ್ ಗಳಿಸಿರುವ ರೋಹಿತ್ ಈಗ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಎರಡನೇ ಶತಕ ಸಿಡಿಸಿದರು.

32ರ ಹರೆಯದ ರೋಹಿತ್ 10ನೇ ಓವರ್‌ನಲ್ಲಿ ರನೌಟ್‌ನಿಂದ ಬಚಾವಾದರು. ರಾಹುಲ್‌ರೊಂದಿಗಿನ ಸಂವಹನ ಕೊರತೆಯಿಂದಾಗಿ ರೋಹಿತ್ ರನೌಟ್ ಆಗುವ ಭೀತಿ ಎದುರಿಸಿದ್ದರು. ಆದರೆ, ಪಾಕ್‌ನ ಫಾಕರ್ ಝಮಾನ್ ಎಸೆದ ಚೆಂಡು ಗುರಿ ತಪ್ಪಿತು. ಆಗ ರೋಹಿತ್ 32 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News