ಏಕದಿನ ಕ್ರಿಕೆಟ್‌: ಸಚಿನ್ ದಾಖಲೆ ಮುರಿದ ಕೊಹ್ಲಿ

Update: 2019-06-16 13:16 GMT

ಮ್ಯಾಂಚೆಸ್ಟರ್, ಜೂ.16: ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11,000 ರನ್ ಪೂರೈಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ರವಿವಾರ ತನ್ನ ಯಶಸ್ವಿ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡರು.

ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

 ಕೊಹ್ಲಿಗೆ ಪಾಕ್ ವಿರುದ್ಧ ಪಂದ್ಯಕ್ಕಿಂತ ಮೊದಲು 11,000 ರನ್ ಪೂರೈಸಲು ಕೇವಲ 57 ರನ್ ಅಗತ್ಯವಿತ್ತು. ‘ರನ್ ಯಂತ್ರ’ಖ್ಯಾತಿಯ ಕೊಹ್ಲಿ ಕೇವಲ 222 ಇನಿಂಗ್ಸ್‌ಗಳಲ್ಲಿ(230 ಪಂದ್ಯಗಳು)11,000 ರನ್ ಪೂರೈಸಿದರು. ವೇಗವಾಗಿ 11 ಸಾವಿರ ರನ್ ಮೈಲುಗಲ್ಲು ತಲುಪಿದ ವಿಶ್ವದ ಮೊದಲ ದಾಂಡಿಗನೆಂಬ ಕೀರ್ತಿಗೆ ಭಾಜನರಾದರು. ಈ ಮೂಲಕ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದರು. ತೆಂಡುಲ್ಕರ್ 276 ಇನಿಂಗ್ಸ್‌ಗಳಲ್ಲಿ(284 ಪಂದ್ಯಗಳು)11,000 ರನ್ ಪೂರೈಸಿದ್ದರು.

 ವೇಗವಾಗಿ 11,000 ರನ್ ಪೂರೈಸಿದ ದಾಂಡಿಗರ ಪಟ್ಟಿಯಲ್ಲಿ ಕೊಹ್ಲಿ ಮೊದಲ ಸ್ಥಾನಕ್ಕೇರಿದರೆ, ಸಚಿನ್ ಎರಡನೇ ಹಾಗೂ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್(295 ಪಂದ್ಯಗಳು, 286 ಇನಿಂಗ್ಸ್)ಮೂರನೇ, ಭಾರತದ ಮಾಜಿ ನಾಯಕ ಸೌರವ್ ಗಂಗುಲಿ (288 ಇನಿಂಗ್ಸ್, 295 ಪಂದ್ಯಗಳು)ನಾಲ್ಕನೇ, ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್(293 ಇನಿಂಗ್ಸ್/307 ಪಂದ್ಯಗಳು) ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕರ(318 ಇನಿಂಗ್ಸ್/340 ಪಂದ್ಯಗಳು)ಕ್ರಮವಾಗಿ 5ನೇ ಹಾಗೂ ಆರನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News