ಸುರಕ್ಷಿತವಾಗಿ ಯುಎಇ ಕರಾವಳಿ ತಲುಪಿದ ತೈಲ ಟ್ಯಾಂಕರ್‌ಗಳು

Update: 2019-06-17 17:50 GMT

ದುಬೈ, ಜೂ. 17: ಇತ್ತೀಚೆಗೆ ಒಮಾನ್ ಕೊಲ್ಲಿಯಲ್ಲಿ ದಾಳಿಗೊಳಗಾಗಿರುವ ಎರಡು ತೈಲ ಟ್ಯಾಂಕರ್‌ಗಳು ರವಿವಾರ ಸುರಕ್ಷಿತವಾಗಿ ಯುಎಇ ಕರಾವಳಿಯನ್ನು ತಲುಪಿವೆ.

ಗುರುವಾರ ಒಮಾನ್ ಕೊಲ್ಲಿಯಲ್ಲಿ ಸಾಗುತ್ತಿದ್ದ ಜಪಾನ್ ಒಡೆತನದ ‘ಕೊಕುಕ ಕರೇಜಿಯಸ್’ ಮತ್ತು ನಾರ್ವೆ ಚಾಲಿತ ‘ಫ್ರಂಟ್ ಆಲ್ಟಾಯಿರ್’ ಹಡಗುಗಳ ಮೇಲೆ ದಾಳಿಗಳು ನಡೆದಿದ್ದವು. ಅದು ಈ ಸಮುದ್ರ ಮಾರ್ಗದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದ ಎರಡನೇ ದಾಳಿಯಾಗಿತ್ತು. ಜಪಾನ್ ಹಡಗು ಅತ್ಯಂತ ದಹನಶೀಲ ಮೆತನಾಲ್ ಒಯ್ಯುತ್ತಿತ್ತು.

ಈ ದಾಳಿಯ ಹಿಂದೆ ಇರಾನ್ ಇದೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಆರೋಪಿಸಿದ್ದಾರೆ. ಸೌದಿ ಅರೇಬಿಯ ಕೂಡ ಇರಾನ್ ವಿರುದ್ದ ಸಂಶಯದ ಬೆರಳನ್ನು ತೋರಿಸಿದೆ. ಆದರೆ, ಈ ಆರೋಪಗಳನ್ನು ಇರಾನ್ ಸ್ಪಷ್ಟವಾಗಿ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News