ವಿಶ್ವಕಪ್: ಅಫ್ಘಾನ್ ವಿರುದ್ಧ ಇಂಗ್ಲೆಂಡ್ 397 ರನ್

Update: 2019-06-18 13:12 GMT

ಮ್ಯಾಂಚೆಸ್ಟರ್, ಜೂ.18: ನಾಯಕ ಇಯಾನ್ ಮೊರ್ಗನ್ ಶತಕ(148, 71 ಎಸೆತ), ಬೈರ್‌ಸ್ಟೋವ್(90), ಜೋ ರೂಟ್(88) ಅರ್ಧಶತಕದ ಸಹಾಯದಿಂದ ಆತಿಥೇಯ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ವಿಶ್ವಕಪ್‌ನ 24ನೇ ಪಂದ್ಯದಲ್ಲಿ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 397 ರನ್ ಗಳಿಸಿದೆ.

ಮಂಗಳವಾರ ಟಾಸ್ ಜಯಿಸಿ ಇಂಗ್ಲೆಂಡ್ ತಂಡ ದಾಂಡಿಗರ ಸ್ನೇಹಿ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅಫ್ಘಾನಿಸ್ತಾನ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಇಂಗ್ಲೆಂಡ್‌ನ ಪರ ನಾಯಕ ಮೊರ್ಗನ್(148, 71 ಎಸೆತ, 4 ಬೌಂಡರಿ, 17 ಸಿಕ್ಸರ್)ಸಿಕ್ಸರ್‌ಗಳ ಸುರಿಮಳೆಗರೆದು ತಂಡದ ಮೊತ್ತವನ್ನು 400ರ ಗಡಿ ತಲುಪಿಸಿದರು.

ಬೈರ್ ಸ್ಟೋವ್(90,99 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ರೂಟ್(88, 82 ಎಸೆತ, 5 ಬೌಂಡರಿ, 1 ಸಿಕ್ಸರ್)ಅರ್ಧಶತಕಗಳ ಕೊಡುಗೆ ನೀಡಿ ತಂಡದ ಮೊತ್ತ ಹೆಚ್ಚಿಸಲು ನೆರವಾದರು.

ಅಫ್ಘಾನ್ ಪರ ದೌಲತ್ ಝದ್ರಾನ್(3-85) ಹಾಗೂ ಗುಲ್ಬದ್ದೀನ್ ನೈಬ್(3-68) ತಲಾ ಮೂರು ವಿಕೆಟ್ ಪಡೆದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News