ವಿಶ್ವಕಪ್‌ನಲ್ಲಿ ನಾಲ್ಕನೇ ವೇಗದ ಶತಕ ಸಿಡಿಸಿದ ಮೊರ್ಗನ್

Update: 2019-06-18 14:16 GMT

ಮ್ಯಾಂಚೆಸ್ಟರ್, ಜೂ.18: ಅಫ್ಘಾನಿಸ್ತಾನ ವಿರುದ್ಧ ಮಂಗಳವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಇಯಾನ್ ಮೊರ್ಗನ್ ಕೇವಲ 57 ಎಸೆತಗಳಲ್ಲಿ ಶತಕ ಪೂರೈಸಿದರು. ವಿಶ್ವಕಪ್ ಇತಿಹಾಸದಲ್ಲಿ ವೇಗವಾಗಿ ಶತಕ ಸಿಡಿಸಿದ ಇಂಗ್ಲೆಂಡ್ ಆಟಗಾರನೆಂಬ ಕೀರ್ತಿಗೆ ಭಾಜನರಾದರು.

71 ಎಸೆತಗಳಲ್ಲಿ 148 ರನ್ ಗಳಿಸಿದ ಮೊರ್ಗನ್ ಇನಿಂಗ್ಸ್‌ನ ಅಂಕಿ-ಅಂಶ ಇಂತಿದೆ

► ತನ್ನ ಇನಿಂಗ್ಸ್‌ನಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸಿದ ಮೊರ್ಗನ್ ಏಕದಿನ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್ ದಾಖಲೆಯನ್ನು ಮುರಿದರು. ರೋಹಿತ್ ಶರ್ಮಾ, ಎಬಿಡಿ ವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಏಕದಿನ ಇನಿಂಗ್ಸ್‌ವೊಂದರಲ್ಲಿ ತಲಾ 16 ಸಿಕ್ಸರ್‌ಗಳನ್ನು ಸಿಡಿಸಿ ಜಂಟಿ ದಾಖಲೆ ನಿರ್ಮಿಸಿದ್ದರು.

► ವಿಶ್ವಕಪ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ 17 ಸಿಕ್ಸರ್‌ಗಳನ್ನು ಸಿಡಿಸಿದ ಇಂಗ್ಲೆಂಡ್‌ನ ಮೊದಲ ಬ್ಯಾಟ್ಸ್‌ಮನ್ ಮೊರ್ಗನ್. ಈ ಟೂರ್ನಮೆಂಟ್‌ಗೆ ಮೊದಲು ಡೇವಿಡ್ ಗೊವೆರ್ (9)ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ದಾಖಲೆ ನಿರ್ಮಿಸಿದ್ದರು.

► ವಿಶ್ವಕಪ್ ಇತಿಹಾಸದಲ್ಲಿ ಮೊರ್ಗನ್ ನಾಲ್ಕನೇ ವೇಗದ ಶತಕ ಸಿಡಿಸಿದ ದಾಂಡಿಗ ಎನಿಸಿಕೊಂಡರು. ಈ ಹಿಂದೆ ಕೇವಲ 3 ಬಾರಿ ವಿಶ್ವಕಪ್‌ನಲ್ಲಿ ಕಡಿಮೆ ಎಸೆತಗಳಲ್ಲಿ ಶತಕ ದಾಖಲಾಗಿದೆ. 2011ರ ವಿಶ್ವಕಪ್‌ನಲ್ಲಿ ಐರ್ಲೆಂಡ್‌ನ ಕೆವಿನ್ ಒ’ಬ್ರಿಯಾನ್ 50 ಎಸೆತಗಳಲ್ಲಿ ಶತಕ ಸಿಡಿಸಿದ್ದರು. 2015ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯದ ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ದಕ್ಷಿಣ ಆಫ್ರಿಕದ ಡಿವಿಲಿಯರ್ಸ್ ಕ್ರಮವಾಗಿ 51 ಹಾಗೂ 52 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು.

► ಇಂಗ್ಲೆಂಡ್ ತನ್ನ ಇನಿಂಗ್ಸ್‌ನಲ್ಲಿ ಇಂದು 25 ಸಿಕ್ಸರ್‌ಗಳನ್ನು ಸಿಡಿಸಿದೆ. ಇದು ಯಾವುದೇ ಏಕದಿನ ಇನಿಂಗ್ಸ್‌ನಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಸಂಖ್ಯೆ ಸಿಕ್ಸರ್. ಈ ವರ್ಷಾರಂಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 24 ಸಿಕ್ಸರ್ ಸಿಡಿಸಿರುವುದು ಈವರೆಗಿನ ದಾಖಲೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News