ವಿಶ್ವಕಪ್: ಕಿವೀಸ್ ವಿರುದ್ಧ ದಕ್ಷಿಣ ಆಫ್ರಿಕ 241/6

Update: 2019-06-19 14:43 GMT

ಬರ್ಮಿಂಗ್‌ಹ್ಯಾಮ್, ಜೂ.19: ವಾಂಡರ್ ಡುಸ್ಸೆನ್ (ಔಟಾಗದೆ 67 ರನ್ , 64 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಹಾಶಿಮ್ ಅಮ್ಲ(55, 83 ಎಸೆತ, 4 ಬೌಂಡರಿ)ಅರ್ಧಶತಕದ ಕೊಡುಗೆಯ ಹೊರತಾಗಿಯೂ ಮಳೆಬಾಧಿತ ವಿಶ್ವಕಪ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ ನ್ಯೂಝಿಲ್ಯಾಂಡ್ ವಿರುದ್ಧ 49 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 241 ರನ್ ಗಳಿಸಲಷ್ಟೇ ಶಕ್ತವಾಗಿದೆ.

ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೈದಾನದಲ್ಲಿ ತೇವಾಂಶವಿದ್ದ ಕಾರಣ ಪಂದ್ಯ ವಿಳಂಬವಾಗಿ ಆರಂಭವಾಗಿದ್ದು, 1 ಓವರ್ ಕಡಿತಗೊಳಿಸಿ 49 ಓವರ್‌ಗಳ ಪಂದ್ಯ ಆಡಲು ನಿರ್ಧರಿಸಲಾಯಿತು.

ಬ್ಯಾಟಿಂಗ್ ಆರಂಭಿಸಿದ ದ.ಆಫ್ರಿಕ 1.5ನೇ ಓವರ್‌ನಲ್ಲಿ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್(5) ವಿಕೆಟನ್ನು ಬೇಗನೆ ಕಳೆದುಕೊಂಡಿತು. 2ನೇ ವಿಕೆಟ್‌ಗೆ 50 ರನ್ ಸೇರಿಸಿದ ಅಮ್ಲ ಹಾಗೂ ನಾಯಕ ಪ್ಲೆಸಿಸ್(23) ತಂಡವನ್ನು ಆಧರಿಸಿದರು. ಔಟಾಗದೆ 67 ರನ್ ಗಳಿಸಿದ ಡುಸ್ಸೆನ್ ತಂಡದ ಮೊತ್ತವನ್ನು 240ರ ಗಡಿ ದಾಟಿಸಿದರು. ಮರ್ಕರಮ್(38), ಡೇವಿಡ್ ಮಿಲ್ಲರ್(36)ಎರಡಂಕೆಯ ಸ್ಕೋರ್ ಗಳಿಸಿದರು.

ಕಿವೀಸ್ ಪರ ಫರ್ಗ್ಯುಸನ್(3-55) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News