ವಿಶ್ವಕಪ್: ಆಸ್ಟ್ರೇಲಿಯ 381/5

Update: 2019-06-20 14:54 GMT

 ನಾಟಿಂಗ್‌ಹ್ಯಾಮ್, ಜೂ.20: ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಶತಕ(166, 147 ಎಸೆತ), ಉಸ್ಮಾನ್ ಖ್ವಾಜಾ(89, 72 ಎಸೆತ) ಹಾಗೂ ಆ್ಯರೊನ್ ಫಿಂಚ್(53, 51 ಎಸೆತ) ಅರ್ಧಶತಕದ ಸಹಾಯದಿಂದ ಆಸ್ಟ್ರೇಲಿಯ ತಂಡ ಬಾಂಗ್ಲಾದೇಶ ವಿರುದ್ಧ ವಿಶ್ವಕಪ್‌ನ 26ನೇ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸಿದೆ.

ಟಾಸ್ ಜಯಿಸಿದ ಆಸೀಸ್ ನಾಯಕ ಫಿಂಚ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆಸೀಸ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 381 ರನ್ ಗಳಿಸಿದ ಬೆನ್ನಿಗೆ ಜೋರಾಗಿ ಮಳೆ ಸುರಿದು ಪಂದ್ಯ ಸ್ಥಗಿತಗೊಂಡಿತು. ಮಳೆ ಆಗಮಿಸಿದಾಗ ಸ್ಟೋನಿಸ್(6) ಹಾಗೂ ಕಾರೆ(ಅಜೇಯ 9)ಕ್ರೀಸ್‌ನಲ್ಲಿದ್ದರು.

ಇನಿಂಗ್ಸ್ ಆರಂಭಿಸಿದ ವಾರ್ನರ್ ಹಾಗೂ ಫಿಂಚ್ ಮೊದಲ ವಿಕೆಟ್‌ಗೆ 121 ರನ್ ಜೊತೆಯಾಟ ನಡೆಸಿ ಬೃಹತ್ ಮೊತ್ತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಫಿಂಚ್ 53 ರನ್ ಗಳಿಸಿ(51 ಎಸೆತ, 5 ಬೌಂಡರಿ, 2 ಸಿಕ್ಸರ್)20.5ನೇ ಓವರ್‌ನಲ್ಲಿ ಸರ್ಕಾರ್‌ಗೆ ವಿಕೆಟ್ ಒಪ್ಪಿಸಿದರು.

ಆಗ 2ನೇ ವಿಕೆಟ್‌ಗೆ ಉಸ್ಮಾನ್ ಖ್ವಾಜಾ(89, 72 ಎಸೆತ, 10 ಬೌಂಡರಿ)ಅವರೊಂದಿಗೆ 192 ರನ್ ಜೊತೆಯಾಟದಲ್ಲಿ ಭಾಗಿಯಾದ ವಾರ್ನರ್ ತಂಡವನ್ನು ಉತ್ತಮ ಮೊತ್ತದತ್ತ ಕೊಂಡೊಯ್ದರು.

110 ಎಸೆತಗಳಲ್ಲಿ 16ನೇ ಶತಕ ಪೂರೈಸಿದ ವಾರ್ನರ್ ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಶತಕ ದಾಖಲಿಸಿದ ನಾಲ್ಕನೇ ದಾಂಡಿಗ ಎನಿಸಿಕೊಂಡರು. ರೋಹಿತ್ ಶರ್ಮಾ, ಶಾಕಿಬ್ ಅಲ್ ಹಸನ್ ಹಾಗೂ ಜೋ ರೂಟ್ ಈಗಾಗಲೇ ತಲಾ 2 ಶತಕ ದಾಖಲಿಸಿದ್ದಾರೆ.

ಬಾಂಗ್ಲಾದ ಪರ ಸೌಮ್ಯ ಸರ್ಕಾರ್(3-58) ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News