ಸೌದಿಗೆ ಶಸ್ತ್ರಾಸ್ತ್ರ ಮಾರಾಟ ಒಪ್ಪಂದಕ್ಕೆ ಅಮೆರಿಕ ಸೆನೆಟ್ ತಡೆ

Update: 2019-06-21 17:35 GMT

ವಾಶಿಂಗ್ಟನ್, ಜೂ. 21: ಸೌದಿ ಅರೇಬಿಯ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇತರ ದೇಶಗಳಿಗೆ ಬಿಲಿಯಗಟ್ಟಳೆ ಡಾಲರ್ ವೌಲ್ಯದ ಸೇನಾ ಉಪಕರಣಗಳನ್ನು ಮಾರಾಟ ಮಾಡುವ ವ್ಯವಹಾರಕ್ಕೆ ಅಮೆರಿಕದ ಸೆನೆಟ್ ಗುರುವಾರ ತಡೆ ಹಾಕಿದೆ.

ಇರಾನ್‌ಗೆ ಸಂಬಂಧಿಸಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಮೂಲಕ, ಈ ಶಸ್ತ್ರಾಸ್ತ್ರ ವ್ಯವಹಾರಗಳನ್ನು ಸಂಸತ್ತು ಕಾಂಗ್ರೆಸ್ ಪರಿಶೀಲಿಸುವುದನ್ನು ನಿರಾಕರಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನೂ ಅದು ತಿರಸ್ಕರಿಸಿದೆ.

ಆದರೆ, 8.1 ಬಿಲಿಯ ಡಾಲರ್ (ಸುಮಾರು 56,400 ಕೋಟಿ ರೂಪಾಯಿ) ಮೊತ್ತದ ವ್ಯವಹಾರಗಳನ್ನು ಮುಂದುವರಿಸಿಕೊಂಡು ಹೋಗುವುದಕ್ಕಾಗಿ ಸೆನೆಟ್ ನಿರ್ಧಾರಕ್ಕೆ ವೀಟೊ ಚಲಾಯಿಸುವುದಾಗಿ ಟ್ರಂಪ್ ಹೇಳಿದ್ದಾರೆ.

ಒಂದು ವೇಳೆ, ಟ್ರಂಪ್ ವೀಟೊ ಚಲಾಯಿಸಿದರೆ, ಅವರ ವೀಟೊವನ್ನು ಹೋಗಲಾಡಿಸಲು ಸೆನೆಟರ್‌ಗಳಿಗೆ 67 ವೀಟೊಗಳು ಬೇಕಾಗುತ್ತವೆ. ಆದರೆ, ಗುರುವಾರದ ಮತಗಳನ್ನು ಗಮನಿಸಿದರೆ ಇದು ಅಸಂಭವ ಎಂಬಂತೆ ಕಾಣುತ್ತದೆ.

ಗುರುವಾರ ಮೊದಲ ಮತ್ತು ಎರಡನೇ ನಿರ್ಣಯಗಳನ್ನು 53-45 ಮತಗಳ ಅಂತರದಿಂದ ಅಂಗೀಕರಿಸಲಾಯಿತು ಹಾಗೂ ಮೂರನೇ ನಿರ್ಣಯವು 51-45 ಮತಗಳ ಅಂತರದಿಂದ ಅಂಗೀಕಾರಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News